alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಬೈಕ್ ಕದ್ದು ಕುಡುಕನ ಸಿಟಿ ರೌಂಡ್ಸ್

hasan-bbk

ಹಾಸನ: ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಪೊಲೀಸ್ ಬೈಕ್, ಕ್ಯಾಪ್ ಕದ್ದಿದ್ದಲ್ಲದೇ, ಅದರಲ್ಲೇ ಸಿಟಿ ರೌಂಡ್ಸ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.

ಗಸ್ತು ತಿರುಗಲು ನೀಡಲಾಗಿದ್ದ ಬೈಕ್ ಒಂದನ್ನು ಪೊಲೀಸರೊಬ್ಬರು ನಿಲ್ಲಿಸಿ, ಅಲ್ಲೇ ಕ್ಯಾಪ್ ಬಿಟ್ಟಿದ್ದಾರೆ. ಇದನ್ನು ಗಮನಿಸಿದ ಕುಡುಕನೊಬ್ಬ, ಬೈಕ್ ಕದ್ದು, ಹ್ಯಾಟ್ ಧರಿಸಿ ಊರ ತುಂಬ ಓಡಾಡಿದ್ದಾನೆ.

ಇದನ್ನು ಗಮನಿಸಿದವರು ಬೈಕ್ ನಿಲ್ಲಿಸುವಂತೆ ಹೇಳಿದರೂ, ಕೇಳದೇ ಸುಮಾರು 20 ನಿಮಿಷ ಹಾಸನದ ತುಂಬಾ ಓಡಾಡಿದ್ದಾನೆ.

ಕೊನೆಗೆ ಆತನನ್ನು ಎಂ.ಜಿ. ರಸ್ತೆ ಸರ್ಕಲ್ ನಲ್ಲಿ ಪೊಲೀಸರು ಕಷ್ಟಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಫುಲ್ ಟೈಟಾಗಿ ಪೊಲೀಸ್ ಕ್ಯಾಪ್ ಧರಿಸಿ ಬೈಕ್ ನಲ್ಲಿ ಈತ ಸಿಟಿ ರೌಂಡ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...