alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ಧರಾಮಯ್ಯ ವಾಚ್, ಕನ್ನಡಕದ ಬೆಲೆ ಕೇಳಿದ್ರೇ ದಂಗಾಗ್ತೀರಿ

sidramayya

ರಾಜಕಾರಣಿಗಳು ಸರಳವಾಗಿಯೇ ಇರಬೇಕೆಂಬ ನಿಯಮವೇನೂ ಇಲ್ಲ. ಕೆಲವು ರಾಜಕಾರಣಿಗಳು ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವರು ಖಾದಿ ಡ್ರೆಸ್ ನಲ್ಲಿ ಮಿಂಚುತ್ತಾರೆ. ಉಳಿದವರು ಸಾದಾ ಉಡುಪುಗಳನ್ನು ಧರಿಸುತ್ತಾರೆ. ಇಷ್ಟೆಲ್ಲಾ ಪೀಠಿಕೆ ಏಕೆ? ಎಂದುಕೊಂಡಿರಾ?

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸುಮಾರು 25 ಲಕ್ಷ ರೂ. ಮೌಲ್ಯದ ವಾಚ್ ಕಟ್ಟಿಕೊಳ್ಳುತ್ತಾರೆ. ಅವರ ಬಳಿ 12 ಲಕ್ಷ ರೂ. ಬೆಲೆ ಬಾಳುವ ರೋಲೆಕ್ಸ್ ವಾಚ್ ಇದ್ದು, ಅದರಲ್ಲಿ ಚಿನ್ನ, ವಜ್ರದ ಹರಳುಗಳಿವೆ. ಇದರೊಂದಿಗೆ ಅವರ ಬಳಿ 13 ಲಕ್ಷ ರೂ. ಬೆಲೆಯ ದುಬಾರಿ ವಾಚ್ ಕೂಡ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಅವರ ಆರೋಪಕ್ಕೆ ಮೈಸೂರಿನಲ್ಲಿ ತಿರುಗೇಟು ನೀಡಿರುವ ಸಿದ್ಧರಾಮಯ್ಯ, ಅಷ್ಟೊಂದು ಬೆಲೆಯ ವಾಚ್, ಕನ್ನಡಕ ಧರಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಬೇಕಾದರೆ, ನನ್ನ ಕನ್ನಡಕವನ್ನು 50 ಸಾವಿರಕ್ಕೆ ಹಾಗೂ ವಾಚ್ ಅನ್ನು 10 ಲಕ್ಷ ರೂಪಾಯಿಗೆ ಕುಮಾರಸ್ವಾಮಿ ಖರೀದಿಸಲಿ ಎಂದು ವಾಚ್, ಕನ್ನಡಕ ತೋರಿಸುತ್ತಾ ಹೇಳಿದ್ದಾರೆ. ಕೆಲವು ರಾಜಕಾರಣಿಗಳು ದುಬಾರಿ ವಾಚ್, ಕನ್ನಡಕ ಬಳಸುತ್ತಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...