alex Certify
ಕನ್ನಡ ದುನಿಯಾ       Mobile App
       

Kannada Duniya

ಅಭ್ಯರ್ಥಿಗಳ ಹಣೆಬರಹ ಬರೆಯುತ್ತಿರುವ ಮತದಾರರು

EVM Picture

ಮೊದಲ ಹಂತದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಇಂದು ಮತದಾನ ಆರಂಭವಾಗಿದ್ದು, ಕೆಲವೆಡೆ ಬಿರುಸಿನಿಂದ ಸಾಗಿದ್ದರೆ, ಮತ್ತೆ ಕೆಲವೆಡೆ ಮಂದಗತಿಯಲ್ಲಿ ಸಾಗಿದೆ. ಬೆಳಿಗ್ಗೆಯಿಂದಲೇ ಸರತಿಯ ಸಾಲಿನಲ್ಲಿ ಮತದಾರರು ಮತಗಟ್ಟೆಯ ಬಳಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮೊದಲ ಹಂತದ ಪಂಚಾಯತ್ ಚುನಾವಣೆ ಜೊತೆಗೆ ಹೆಬ್ಬಾಳ, ಬೀದರ್, ದೇವದುರ್ಗ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೂ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೆಲ ಕಡೆಗಳಲ್ಲಿನ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ತಡವಾಗಿ ಮತದಾನ ಆರಂಭವಾಗಿದೆ. ಕೂಡಲೇ ಬದಲಿ ಮತಯಂತ್ರ ಬಳಸಿ ಮತದಾನ ಆರಂಭಿಸಲಾಗಿದೆ. ಸಣ್ಣಪುಟ್ಟ ಗೊಂದಲ, ಘರ್ಷಣೆ ಹೊರತುಪಡಿಸಿ ಶಾಂತಿಯುತವಾಗಿ ಮತದಾನ ಆರಂಭವಾಗಿದೆ.

ಈ ಬಾರಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಕಡ್ಡಾಯ ಮಾಡಲಾಗಿದೆ. ಮತದಾರರು ಯಾವ ಅಭ್ಯರ್ಥಿಯೂ ತಮಗೆ  ಇಷ್ಟವಾಗದಿದ್ದರೆ ನೋಟಾ ಚಲಾಯಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆಯಿಂದಲೇ ಜನ ಉತ್ಸಾಹದಿಂದ ಮತದಾನ ಮಾಡಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...