alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಮದೇವರ ಜಾತ್ರೆಯಲ್ಲಿ ಮಾರಾಮಾರಿ

ಹಾಸನ: ಹಾಸನ ತಾಲ್ಲೂಕು ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಿಹಳ್ಳಿಯಲ್ಲಿ ಬೀರಪ್ಪ ದೇವರ ಜಾತ್ರೆಯಲ್ಲಿ ರಾಜಕೀಯ ಕಾರಣದಿಂದ ಗಲಾಟೆ ನಡೆದಿದೆ.

ಉತ್ಸವದ ವೇಳೆ 2 ಕುಟುಂಬಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಬಳಿಕ ಜಾತ್ರೆಗೆ ಬಂದಿದ್ದ ಯುವಕರ ಗುಂಪು ಮತ್ತು ಗ್ರಾಮದ ವ್ಯಕ್ತಿಯೊಬ್ಬರ ನಡುವೆ ಜಗಳವಾಗಿದೆ. ಅಲ್ಲಿದ್ದವರು ಸಮಾಧಾನಪಡಿಸಿದ್ದಾರೆ.

ರಾತ್ರಿ ಸುಮಾರು 20 ಮಂದಿ ಇದ್ದ ಯುವಕರ ಗುಂಪು, ಗ್ರಾಮದ ಗಿರೀಶ್, ಜಯಲಕ್ಷ್ಮಿ ಅವರ ಮನೆ ಮೇಲೆ ದಾಳಿ ನಡೆಸಿದೆ. ಕಲ್ಲು, ಇಟ್ಟಿಗೆ, ದೊಣ್ಣೆಗಳಿಂದ ಹಲ್ಲೆ ಮಾಡಿದ್ದು, ಪೀಠೋಪಕರಣಗನ್ನೂ ಹಾನಿಗೊಳಿಸಲಾಗಿದೆ. ಗಾಯಗೊಂಡಿರುವ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...