alex Certify
ಕನ್ನಡ ದುನಿಯಾ       Mobile App
       

Kannada Duniya

ಜಾತ್ರೆಯ ನಾಟಕದ ವೇಳೆಯೇ ನಡೀತು ನಡೆಯಬಾರದ ಘಟನೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಕಂಡೇನಹಳ್ಳಿಯಲ್ಲಿ ದೇವರ ಜಾತ್ರೆಯ ವೇಳೆಯೇ ಘರ್ಷಣೆ ನಡೆದಿದೆ.

ಕಂಡೇನಹಳ್ಳಿ ಶನೇಶ್ವರ ದೇವರ ಜಾತ್ರೆ ಪ್ರಯುಕ್ತ ನಾಟಕ ಪ್ರದರ್ಶನ ಆಯೋಜಿಸಿದ್ದು, ನಾಟಕ ವೀಕ್ಷಣೆಗೆ ಬಂದಿದ್ದ ಕೆಲವರು ಅನುಚಿತವಾಗಿ ವರ್ತಿಸಿದ್ದಾರೆ. ಬಂದೋಬಸ್ತ್ ನಲ್ಲಿದ್ದ ಪೊಲೀಸರು ಯುವಕರಿಗೆ ಬುದ್ಧಿಮಾತು ಹೇಳಿದಾಗ, ಅವರ ಮೇಲೆಯೇ ತಿರುಗಿ ಬಿದ್ದ ಕೆಲವರು ಹಲ್ಲೆ ಮಾಡಿದ್ದಲ್ಲದೇ, ಪೊಲೀಸ್ ವಾಹನವನ್ನು ಜಖಂಗೊಳಿಸಿದ್ದಾರೆ.

ಘಟನೆಯಲ್ಲಿ ಪೊಲೀಸರಾದ ನಾಗರಾಜ್, ತಿಮ್ಮಣ್ಣ, ಜಾಫರ್, ದಿಲೀಪ್ ಅವರಿಗೆ ಗಾಯಗಳಾಗಿವೆ. ಗ್ರಾಮಸ್ಥ ಸತೀಶ್ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಅಬ್ಬಿನಹೊಳೆ ಠಾಣೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಯುವಕರನ್ನು ವಶಕ್ಕೆ ಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...