alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆಯಲ್ಲೇ ಅರೆನಗ್ನಗೊಳಿಸಿ ಮಹಿಳೆ ಮೇಲೆ ಹಲ್ಲೆ

mahile-aa

ವಿಜಯಪುರ: ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಘಟನೆಯೊಂದು, ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬಂದನಾಳ್ ಗ್ರಾಮದಲ್ಲಿ ನಡೆದಿದೆ.

ಮಹಿಳಾ ಸಂಘಟನೆಯೊಂದರ ಕಾರ್ಯಕರ್ತೆ ಸುಜಾತಾ ಹಲ್ಲೆಗೊಳಗಾದವರು. ಗ್ರಾಮದ ಶ್ರೀಕಾಂತ್(37) ಎಂಬಾತ 2 ದಿನಗಳಿಂದ ನಾಪತ್ತೆಯಾಗಿದ್ದು, ಆತನ ಶವ ಹೊರವಲಯದಲ್ಲಿ ಪತ್ತೆಯಾಗಿತ್ತು.

ಆತನ ಪತ್ನಿ ರೇಣುಕಾ ಕೊಲೆ ಮಾಡಿಸಿದ್ದಾಳೆ ಎಂದು ಶ್ರೀಕಾಂತ್ ಕುಟುಂಬದವರು ಆರೋಪಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ರೇಣುಕಾ ಮೇಲೆ ಶ್ರೀಕಾಂತ್ ಪೋಷಕರು ಹಲ್ಲೆ ಮಾಡಿದ್ದು, ಇದನ್ನು ಮಹಿಳಾ ಸಂಘಟನೆ ಕಾರ್ಯಕರ್ತೆ ಸುಜಾತಾ ವಿರೋಧಿಸಿ, ರೇಣುಕಾ ಪರವಾಗಿ ಮಾತನಾಡಿದ್ದರು.

ರೇಣುಕಾಳನ್ನು ಸಮರ್ಥಿಸಿಕೊಂಡ ಕಾರಣಕ್ಕೆ ಶ್ರೀಕಾಂತ್ ಕಡೆಯವರು ಸುಜಾತಾರನ್ನು ಸಾರ್ವಜನಿಕರೆದುರಲ್ಲೇ ಅರೆಬೆತ್ತಲೆ ಗೊಳಿಸಿ ಅಮಾನವೀಯವಾಗಿ ಥಳಿಸಿದ್ದಾರೆ.

ಅವರ ಸೀರೆ ಬಿಚ್ಚಿ ಎಳೆದಾಡಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...