alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಲ್ಲರೆ ಸಮಸ್ಯೆ: ಆಟೋ ಚಾಲಕರಿಂದ ಉಚಿತ ಸೇವೆ

autoo-jk

ವಿಜಯಪುರ: ದೊಡ್ಡ ಮೊತ್ತದ ನೋಟ್ ಗಳನ್ನು ನಿಷೇಧಿಸಿರುವುದರಿಂದ ಚಿಲ್ಲರೆ ಸಮಸ್ಯೆ ಎದುರಾಗಿ ಜನ ಹೈರಾಣಾಗಿದ್ದಾರೆ.

ಎಲ್ಲರ ಕೈಯಲ್ಲಿಯೂ 500 ರೂ., 1000 ರೂ. ಮುಖಬೆಲೆಯ ನೋಟುಗಳೇ ಹೆಚ್ಚಾಗಿರುವುದರಿಂದ ವಿಜಯಪುರ ಆಟೋಚಾಲಕರು ಪ್ರಯಾಣಿಕರಿಗೆ ಉಚಿತವಾಗಿ ಸೇವೆ ಒದಗಿಸಲು ಮುಂದಾಗಿದ್ದಾರೆ.

ರೈಲ್ವೇ ಸ್ಟೇಷನ್ ನಿಂದ ಗಾಂಧಿ ಚೌಕ್, ಶಿವಾಜಿ ನಗರ ಸೇರಿದಂತೆ ವಿವಿಧ ಕಡೆಗಳಿಗೆ ತೆರಳಲು ಸೀಟ್ ಲೆಕ್ಕದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಗುತ್ತದೆ. ಪ್ರಯಾಣಿಕರು ಮತ್ತು ಆಟೋಚಾಲಕರ ನಡುವೆ ಚಿಲ್ಲರೆ ವಿಷಯಕ್ಕೆ ವಾಗ್ವಾದ ನಡೆಯುತ್ತಿದೆ.

ಇದನ್ನು ತಪ್ಪಿಸಲು ನಾಲ್ವರು ಆಟೋ ಚಾಲಕರು ಉಚಿತವಾಗಿ ಸೇವೆ ಒದಗಿಸಲು ಮುಂದಾಗಿದ್ದಾರೆ. ವಿನಾಯಕ, ರಮೇಶ್, ವಾಸುದೇವ, ಚಂದ್ರು ಎಂಬುವವರು ತಮ್ಮ ಆಟೋಗಳಲ್ಲಿ 3 ದಿನ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...