alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗರೊಂದಿಗೆ ರೇಪ್ ಸಂತ್ರಸ್ಥೆ ಸಂಬಂಧ: IPS ಅಧಿಕಾರಿ

ಬೆಂಗಳೂರು: ವಿಜಯಪುರದಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

ಅತ್ಯಾಚಾರ ಸಂತ್ರಸ್ಥೆ ಅನೇಕ ಹುಡುಗರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ರಕ್ತಸ್ರಾವದಿಂದಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ಐ.ಪಿ.ಎಸ್. ಅಧಿಕಾರಿಯೊಬ್ಬರು ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು, ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಜಯಪುರದಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೆಲವೆಡೆ ಬಂದ್ ಕೂಡ ಆಚರಿಸಲಾಗಿತ್ತು. ಡಿಸೆಂಬರ್ 19 ರಂದು ಘಟನೆ ನಡೆದಿದ್ದು, ಹಲವು ಸಂಘಟನೆಗಳಿಂದ ಆರೋಪಿಗಳ ಬಂಧನಕ್ಕೆ ಹೋರಾಟ ನಡೆಸಲಾಗಿತ್ತು.

ಪ್ರಸ್ತುತ ಮಾನವ ಹಕ್ಕು ಘಟಕದ ಎ.ಡಿ.ಜಿ.ಪಿ.ಯಾಗಿರುವ ಡಾ. ಕೆ. ರಾಮಚಂದ್ರರಾವ್ ಅವರು ಘಟನೆ ನಡೆದ ಸಂದರ್ಭಧಲ್ಲಿ ಉತ್ತರ ವಲಯ ಐ.ಜಿ.ಪಿ.ಯಾಗಿದ್ದರು. ಘಟನೆ ನಡೆದ ಸಂದರ್ಭದಲ್ಲಿ ಸಂಘಟನೆಯೊಂದರ ಸಂಚಾಲಕ ಭಾಸ್ಕರ್ ಪ್ರಸಾದ್ ಅವರೊಂದಿಗೆ ರಾಮಚಂದ್ರರಾವ್ ಫೋನ್ ನಲ್ಲಿ ಮಾತನಾಡಿದ್ದಾರೆ.

ಕೊಲೆಯಾದ ಬಾಲಕಿಯ ನಡತೆ ಸರಿ ಇರಲಿಲ್ಲ. ಆಕೆ ಅಪ್ರಾಪ್ತೆಯಾಗಿದ್ದರೂ, ಅನೇಕ ಹುಡುಗರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಗರ್ಭಪಾತ ಕೂಡ ಮಾಡಿಸಿಕೊಂಡಿದ್ದಳು. ಘಟನೆ ನಡೆದ ದಿನದಂದು ಬೇರೆ ಬಾಲಕಿಯೊಂದಿಗೆ ಪರಿಚಯಸ್ಥ ಆಂಟಿ ಮನೆಗೆ ಹೋಗಿ ಸ್ನೇಹಿತನೊಂದಿಗೆ ಸೆಕ್ಸ್ ಮಾಡಿ ಅಸ್ವಸ್ಥಳಾಗಿದ್ದಾಳೆ. ಆಂಟಿ ಮತ್ತು ಆಕೆಯ ಜೊತೆಗಿದ್ದ ಬಾಲಕಿ ಬಟ್ಟೆ ತೊಡಿಸಿದ್ದಾರೆ. ಸ್ಥಳದಲ್ಲಿ ಕಾಂಡೊಮ್ ಪತ್ತೆಯಾಗಿವೆ….ಹೀಗೆಂದು ಆಡಿಯೋ ಸಂಭಾಷಣೆಯಲ್ಲಿ ಕೇಳಿ ಬಂದಿದೆ. ಕೊಲೆಗೀಡಾದ ಬಾಲಕಿಯ ನಡತೆ ಬಗ್ಗೆ ಅಧಿಕಾರಿ ಹೇಳಿಕೆ ನೀಡಿದ್ದು, ಗೃಹ ಸಚಿವರು ಮಾಹಿತಿ ಕೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...