alex Certify
ಕನ್ನಡ ದುನಿಯಾ       Mobile App
       

Kannada Duniya

ಜೂಜು ಅಡ್ಡೆಯಾದ ಜಿಲ್ಲಾಸ್ಪತ್ರೆ, ರೋಗಿಗಳಿಗೆ ಸಿಗ್ತಿಲ್ಲ ಚಿಕಿತ್ಸೆ

ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆ ಜೂಜು ಅಡ್ಡೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪಗಳ ನಡುವೆಯೇ ರೋಗಿಗಳನ್ನು ಗಮನಿಸಬೇಕಾದ ಸಿಬ್ಬಂದಿ ಇಸ್ಪೀಟ್ ಆಟದಲ್ಲಿ ತೊಡಗಿರುವುದು ಕಂಡು ಬಂದಿದೆ.

ಆಂಬುಲೆನ್ಸ್ ಚಾಲಕ ಸೇರಿ ಹಲವು ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿಯೇ ಇಸ್ಪೀಟ್ ಕಾರ್ಡ್ಸ್ ಗಳನ್ನು ಕೈಯಲ್ಲಿಡಿದುಕೊಂಡಿರುವ ದೃಶ್ಯಗಳು ವೈರಲ್ ಆಗಿವೆ. ಆಸ್ಪತ್ರೆಯ ಬೆಡ್ ಶೀಟ್ ಗಳನ್ನು ಹಾಸಿಕೊಂಡು ಆಸ್ಪತ್ರೆ ಆವರಣದಲ್ಲಿಯೇ ಸಿಬ್ಬಂದಿ ಇಸ್ಟೀಟ್ ಆಡಿದ್ದಾರೆ.

ಆಸ್ಪತ್ರೆ ಆವರಣದಲ್ಲಿ ಜೂಜಾಡುವುದನ್ನು ನಿಲ್ಲಿಸುವಂತೆ ಹಿಂದೆಯೇ ರೋಗಿಗಳು, ಸಾರ್ವಜನಿಕರು ತಿಳಿ ಹೇಳಿದ್ದರೂ, ನಿಲ್ಲಿಸಿಲ್ಲ. ಇದರಿಂದ ಅಸಮಾಧಾನಗೊಂಡ ಸಾರ್ವಜನಿಕರು, ಜೂಜಾಟದ ದೃಶ್ಯಗಳನ್ನು ಸೆರೆ ಹಿಡಿದು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...