alex Certify
ಕನ್ನಡ ದುನಿಯಾ       Mobile App
       

Kannada Duniya

ನೀರು ಕುಡಿಯಲು ಹೋದಾಗಲೇ ನಡೀತು ದುರಂತ

ವಿಜಯಪುರ: ಕೆರೆಗೆ ಬಿದ್ದು ಬಾಲಕಿಯರಿಬ್ಬರು ಮೃತಪಟ್ಟ ಘಟನೆ ವಿಜಯಪುರದ ಬೇಗಂ ತಲಾಬ್ ನಲ್ಲಿ ನಡೆದಿದೆ. ಮಂಜುಳಾ(14), ಪ್ರಿಯಾಂಕಾ(13) ಮೃತಪಟ್ಟವರು. ನೀರು ಕುಡಿಯಲು ಕೆರೆಗೆ ಇಳಿದಿದ್ದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ನಾಲ್ವರು ಬಾಲಕಿಯರು ಮೇವು ಸಂಗ್ರಹಿಸಲು ತೆರಳಿದ್ದು, ನೀರು ಕುಡಿಯಲು ಕೆರೆಗೆ ಇಳಿದಿದ್ದಾರೆ. ಮೂವರು ಬಾಲಕಿಯರು ನೀರಿನಲ್ಲಿ ಮುಳುಗಿ ಅಪಾಯಕ್ಕೆ ಸಿಲುಕಿದ್ದು, ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಬಾಲಕಿಯೊಬ್ಬಳನ್ನು ಪಾರು ಮಾಡಿದ್ದಾರೆ.

ಮಂಜುಳಾ ಹಾಗೂ ಪ್ರಿಯಾಂಕಾ ನೀರು ಪಾಲಾಗಿದ್ದಾರೆ. ಜಲನಗರ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...