alex Certify
ಕನ್ನಡ ದುನಿಯಾ       Mobile App
       

Kannada Duniya

ಭೀಮಾತೀರದಲ್ಲಿ ಮತ್ತೆ ಫೈರಿಂಗ್, ಶಶಿಧರ ಮುಂಡೇವಾಡಿಗೆ ಗುಂಡೇಟು

ವಿಜಯಪುರ: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಪಡೆದಿದ್ದ ಶಶಿಧರ ಮುಂಡೇವಾಡಿ ಮೇಲೆ, ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಬರಡೋಲದಲ್ಲಿ ಫೈರಿಂಗ್ ಮಾಡಲಾಗಿದೆ.

ಕಾಲಿಗೆ ಗುಂಡೇಟು ಬಿದ್ದಿರುವ ಶಶಿಧರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಶಶಿಧರ ಮುಂಡೇವಾಡಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ತೊಡಗಿರುವ ಮಾಹಿತಿ ಪಡೆದ ಚಡಚಣ ಠಾಣೆ ಪಿ.ಎಸ್.ಐ. ಗೋಪಾಲ್ ಹಳ್ಳೂರು ಮತ್ತು ಸಿಬ್ಬಂದಿ ಬಂಧನಕ್ಕೆ ತೆರಳಿದ್ದಾರೆ.

ಬೈಕ್ ನಲ್ಲಿ ಬರುತ್ತಿದ್ದ ಶಶಿಧರ ಮುಂಡೇವಾಡಿಯನ್ನು ತಡೆದು ತಪಾಸಣೆ ನಡೆಸಲು ಮುಂದಾದಾಗ, ಆತ ಚಾಕುವಿನಿಂದ ಪೊಲೀಸರ ಮೇಲೆ ದಾಳಿ ಮಾಡಿದ್ದು, ಆಗ ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಲಾಗಿದೆ. ಗೋಪಾಲ್ ಅವರ ಕೈಗೆ ಗಾಯಗಳಾಗಿವೆ.

ಏಪ್ರಿಲ್ ನಲ್ಲಿ ಭೀಮಾತೀರದ ಹಂತಕ ಧರ್ಮರಾಜನ ಮೇಲೆ ಗೋಪಾಲ್ ಹಳ್ಳೂರು ಫೈರಿಂಗ್ ಮಾಡಿದ್ದರು. ಆಗ ಗಾಯಗೊಂಡಿದ್ದ ಗೋಪಾಲ್ ಅವರು ಚೇತರಿಸಿಕೊಂಡಿದ್ದರು. ಇಂದು ಅಕ್ರಮವಾಗಿ ಪಿಸ್ತೂಲ್ ಸಾಗಿಸುತ್ತಿದ್ದ ಶಶಿಧರ ಮುಂಡೇವಾಡಿಯ ಮೇಲೆ ಫೈರಿಂಗ್ ನಡೆಸಿದ್ದಾರೆ. ಗಾಯಾಳು ಗೋಪಾಲ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...