alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕಿತ್ಸೆ ಸಿಗದೇ ಹಾವು ಕಚ್ಚಿದ ಬಾಲಕ ಸಾವು

havu-vijy

ವಿಜಯಪುರ: ಸಕಾಲಕ್ಕೆ ಚಿಕಿತ್ಸೆ ಸಿಗದೇ ಹಾವು ಕಚ್ಚಿದ ಬಾಲಕ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಸಿಂಧಗಿ ತಾಲ್ಲೂಕಿನ ಕೊಕಟನೂರ ಗ್ರಾಮದ 10 ವರ್ಷದ ಬಾಲಕ ಗಣೇಶ್ ನಾಯ್ಕ್ ಮನೆಯ ಬಳಿ ಆಟವಾಡುವಾಗ ವಿಷಕಾರಿ ಹಾವು ಕಚ್ಚಿದೆ.

ಬಾಲಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆತರಲಾಗಿದ್ದು, ಅಲ್ಲಿ ಹಾವಿನ ಕಡಿತಕ್ಕೆ ನೀಡಲಾಗುವ ಔಷಧ ಇಲ್ಲದ ಕಾರಣ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗಿದೆ.

ಆದರೆ, ಬಾಲಕನಿದ್ದ ಆಂಬುಲೆನ್ಸ್ ಮಾರ್ಗಮಧ್ಯದಲ್ಲೇ ಕೆಟ್ಟು ನಿಂತಿದೆ. ಎಷ್ಟೆಲ್ಲಾ ಪ್ರಯತ್ನಿಸಿದರೂ ಆಂಬುಲೆನ್ಸ್ ಮುಂದೆ ಚಲಿಸಿಲ್ಲ. ಇದರಿಂದಾಗಿ ಬಾಲಕ ಸಾವು ಕಂಡಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...