alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಮ್ಯಾನೇಜರ್ ಕೆನ್ನೆಗೆ ಬಾರಿಸಿದ ರೈತ

ವಿಜಯಪುರ: ಸಾಲ ನೀಡಲು ವಿಳಂಬ ಮಾಡಿದ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಆಕ್ರೋಶಗೊಂಡ ರೈತರೊಬ್ಬರು, ಕೆನ್ನೆಗೆ ಬಾರಿಸಿದ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆ ಸಿಂಧಗಿ ತಾಲ್ಲೂಕಿನ ಕನ್ನೊಳ್ಳಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಮ್ಯಾನೇಜರ್ ಅಶೋಕ್ ಅವರ ಮೇಲೆ ರೈತ ಗುರುಲಿಂಗ ಹಲ್ಲೆ ಮಾಡಿದ್ದಾರೆ.

ಗುರುಲಿಂಗ ಸಹೋದರನೊಂದಿಗೆ ಜಮೀನಿನ ವ್ಯಾಜ್ಯ ಹೊಂದಿದ್ದು, ಇದೇ ಕಾರಣಕ್ಕೆ ಬ್ಯಾಂಕ್ ನಿಂದ ಸಾಲ ನೀಡಲು ಮ್ಯಾನೇಜರ್ ವಿಳಂಬ ಮಾಡಿದ್ದಾರೆ.

ಸಾಲಕ್ಕಾಗಿ ಅಲೆದಾಡಿ ಸಾಕಾದ ಗುರುಲಿಂಗ, ಮ್ಯಾನೇಜರ್ ಕೆನ್ನೆಗೆ ಬಾರಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲಿದ್ದವರು ಗುರುಲಿಂಗರನ್ನು ಹಿಡಿದು ಹೊರಗೆ ಕಳಿಸಿದ್ದಾರೆ.

ಈ ದೃಶ್ಯಗಳೆಲ್ಲಾ ಬ್ಯಾಂಕ್ ನಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಂಧಗಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...