alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಜೆ.ಪಿ. ಶಾಸಕ ವಿಜಯಕುಮಾರ್ ಹಠಾತ್ ನಿಧನ

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ ಹಾಗೂ ಬಿ.ಜೆ.ಪಿ. ಅಭ್ಯರ್ಥಿ ವಿಜಯಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪ್ರಚಾರ ನಡೆಸುವ ವೇಳೆಯಲ್ಲೇ ಶಾಸಕ ವಿಜಯಕುಮಾರ್ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ನಿನ್ನೆ ಬೆಳಿಗ್ಗೆಯಿಂದಲೂ ಪ್ರಚಾರದಲ್ಲಿ ನಿರತರಾಗಿದ್ದ ವಿಜಯಕುಮಾರ್ ಸಂಜೆ ಮತಯಾಚನೆ ಮಾಡುವ ಸಂದರ್ಭದಲ್ಲಿ ಎದೆನೋವಿನಿಂದ ಕುಸಿದುಬಿದ್ದ ತಕ್ಷಣ ಅವರ ಬೆಂಬಲಿಗರು ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಅವರು ನಿಧನರಾಗಿದ್ದಾರೆ.

ಹೃದಯ ನಾಳದ ಸಮಸ್ಯೆ ಕಾರಣದಿಂದ 20 ದಿನಗಳ ಹಿಂದೆ ಅವರಿಗೆ ಸ್ಟೆಂಟ್ ಅಳವಡಿಸಲಾಗಿತ್ತು. ಹೆಚ್ಚು ನಡೆಯದಂತೆ ವೈದ್ಯರು ಸಲಹೆ ನೀಡಿದ್ದರಾದರೂ, ಅವರು ಪ್ರಚಾರಕ್ಕಾಗಿ ಬಿಡುವಿಲ್ಲದೇ ಓಡಾಡುತ್ತಿದ್ದರಿಂದ ಹೃದಯಾಘಾತವಾಗಿದೆ ಎನ್ನಲಾಗಿದೆ.

ಮೃತದೇಹವನ್ನು ಜಯನಗರ 4 ನೇ ಬ್ಲಾಕ್ ನಲ್ಲಿರುವ ಅವರ ನಿವಾಸಕ್ಕೆ ತರಲಾಗಿದೆ. ವಿಜಯಕುಮಾರ್ 2008, 2013 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು, ಈ ಬಾರಿಯೂ ಗೆಲುವಿನ ವಿಶ್ವಾಸದಲ್ಲಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...