alex Certify
ಕನ್ನಡ ದುನಿಯಾ       Mobile App
       

Kannada Duniya

ಕೋರ್ಟ್ ತೀರ್ಪಿನಿಂದ ಸಂಕಷ್ಟಕ್ಕೆ ಸಿಲುಕಿದ ಮಲ್ಯ

malya 852

ಒಂದು ಕಾಲದಲ್ಲಿ ಐಷಾರಾಮಿ ಬದುಕಿನಿಂದಲೇ ಗಮನಸೆಳೆದಿದ್ದ ಉದ್ಯಮಿ ವಿಜಯ್ ಮಲ್ಯ ಅವರು ಸಾಲದ ಸುಳಿಯಲ್ಲಿ ಸಿಲುಕಿದ್ದು, ಇದೀಗ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಯುನೈಟೆಡ್ ಸ್ಪಿರಿಟ್ಸ್ ಕಂಪನಿಯಿಂದ ಹೊರಬಂದ ಕಾರಣಕ್ಕೆ ಮಲ್ಯ ಅವರಿಗೆ 515 ಕೋಟಿ ರೂ. ನೀಡಲಾಗಿದೆ.

ಈ ಹಣವನ್ನು ಡ್ರಾ ಮಾಡಿಕೊಳ್ಳಬಾರದೆಂದು ಬೆಂಗಳೂರು ಸಾಲ ವಸೂಲಾತಿ ನ್ಯಾಯಾಧೀಕರಣ ಆದೇಶ ನೀಡಿದೆ. ಮಲ್ಯ ಅವರ ವಿರುದ್ಧ ಎಸ್.ಬಿ.ಐ. ಸೇರಿದಂತೆ 17 ಬ್ಯಾಂಕ್ ಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅವರ ಹಣ ಜಫ್ತಿಗೆ ಆದೇಶ ನೀಡಬೇಕು. ಅವರ ಆಸ್ತಿಯನ್ನು ಬಹಿರಂಗಪಡಿಸಬೇಕೆಂದು ಮನವಿ ಮಾಡಿದ್ದವು. ಅಲ್ಲದೇ, ಮಲ್ಯ ಲಂಡನ್ ನಲ್ಲಿ ನೆಲೆಸಲು ಮುಂದಾಗಿರುವುದರಿಂದ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕೋರಿದ್ದವು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಲ್ಯ ಅವರಿಗೆ ಹಣ ಡ್ರಾ ಮಾಡಿಕೊಳ್ಳದಂತೆ ಸೂಚನೆ ನೀಡಿದೆ. ವಿಚಾರಣೆಯನ್ನು ಮಾರ್ಚ್ 28 ಕ್ಕೆ ಮುಂದೂಡಲಾಗಿದೆ. ನ್ಯಾಯಾಲಯದ ತೀರ್ಪಿನಿಂದ ವಿಜಯ್ ಮಲ್ಯ ಅವರಿಗೆ ಹಿನ್ನಡೆಯಾಗಿದ್ದು, ಅವರು ವಿವಿಧ ಬ್ಯಾಂಕ್ ಗಳಿಂದ ಪಡೆದ ಸುಮಾರು 7,500 ಕೋಟಿ ರೂ. ಸಾಲ ಪಾವತಿಸಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...