alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯ ಚಾಲಾಕಿತನಕ್ಕೆ ಬೇಸ್ತು ಬಿತ್ತಾ ಇ.ಡಿ.?

LONDON, ENGLAND - DECEMBER 12: Sahara Force India Team Principle Vijay Mallya welcomes Sergio Perez as their new driver on December 12, 2013 in London, England. (Photo by Scott Heavey/Getty Images)

ನವದೆಹಲಿ: ವಿವಿಧ ಬ್ಯಾಂಕ್ ಗಳಿಗೆ ಸುಮಾರು 9000 ಕೋಟಿ ರೂ. ಸಾಲ ಕೊಡಬೇಕಿರುವ ಉದ್ಯಮಿ ವಿಜಯ್ ಮಲ್ಯ ಲಂಡನ್ ನಲ್ಲಿ ನೆಲೆಸಿದ್ದು, ಅವರ ವಿರುದ್ಧ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಈ ನಡುವೆ ಉದ್ಯಮಿ ವಿಜಯ್ ಮಲ್ಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ(ಇ.ಡಿ.) ಮುಂದಾಗಿದೆ. ಅವರ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಹೊರಡಿಸುವ ಬಗ್ಗೆ ಇಂಟರ್ ಪೋಲ್ ಗೆ ಪತ್ರ ಕೂಡ ಬರೆಯಲಾಗಿದೆ. ವಿಜಯ್ ಮಲ್ಯ ಅವರಿಗೆ ಸೇರಿದ 1411 ಕೋಟಿ ರೂ. ಆಸ್ತಿ ಜಫ್ತಿಗೆ ಜಾರಿ ನಿರ್ದೇಶನಾಲಯ ಆದೇಶ ನೀಡಿದ್ದು, ಅದರಂತೆ ಕರ್ನಾಟಕದ ಮಡಿಕೇರಿಯಲ್ಲಿನ ಅವರ ಕಾಫಿ ತೋಟ ವಶಕ್ಕೆ ಸೂಚನೆ ನೀಡಲಾಗಿದೆ.

ಆದರೆ, ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳುವ ಮೊದಲೇ ಚಾಲಾಕಿ ಮಲ್ಯ ಅದನ್ನು ಮಾರಿಬಿಟ್ಟಿದ್ದಾರೆ. ಮಡಿಕೇರಿಯ ಸೋಮವಾರ ಪೇಟೆ ತಾಲ್ಲೂಕಿನ ಕುಂಬೂರಿನಲ್ಲಿರುವ 388.75 ಎಕರೆ ತೋಟದಲ್ಲಿ 360 ಎಕರೆಯನ್ನು ಅವರು ಮಾರಾಟ ಮಾಡಿದ್ದಾರೆ.

ಅಲ್ಲದೇ, ಮುಂಬೈನಲ್ಲಿರುವ ಕೆಲವು ಆಸ್ತಿಗಳನ್ನೂ ಅವರು ಮಾರಿದ್ದಾರೆ ಎಂದು ಹೇಳಲಾಗಿದ್ದು, ಇ.ಡಿ. ಕ್ರಮಕ್ಕೆ ಮಲ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾನೂನು ಆಧಾರವಿಲ್ಲದೇ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇ.ಡಿ.ಯ ಈ ಕ್ರಮದಿಂದಾಗಿ ಸಾಲ ತೀರಿಸುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...