alex Certify
ಕನ್ನಡ ದುನಿಯಾ       Mobile App
       

Kannada Duniya

ನನ್ನನ್ಯಾಕೆ ಹುಡುಕುತ್ತೀರಿ..? ಮಾಧ್ಯಮಗಳ ವಿರುದ್ದ ಕಿಡಿ ಕಾರಿದ ಮಲ್ಯ

436801-vijay-mallya-with-bag-getty

ಸಾಲದ ಸುಳಿಯಲ್ಲಿ ಸಿಲುಕಿ ಈಗಾಗಲೇ ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯ ಇದೀಗ ಮಾಧ್ಯಮಗಳ ವಿರುದ್ಧ ಟ್ವಿಟರ್‌‌‌‌ ನಲ್ಲಿ ಕಿಡಿ ಕಾರಿದ್ದು, ಯಾವುದೇ ಕಾರಣಕ್ಕೂ ನನ್ನನ್ನು ಹುಡುಕುವ ವಿಫಲ ಯತ್ನ ನಡೆಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಹೌದು. ಮಲ್ಯ ವಿದೇಶಕ್ಕೆ ತೆರಳುತ್ತಿದ್ದಂತೆ ಕೆಲವು ಮಾಧ್ಯಮಗಳು ಅವರು ಜಿನಿವಾಕ್ಕೆ ತೆರಳಿದ್ದಾರೆ ಎಂಬ ವಾದ ಮಂಡಿಸಿದ್ದರೆ ಇನ್ನು ಕೆಲವು ಮಾಧ್ಯಮಗಳು ಲಂಡನ್ ಗೆ ತೆರಳಿದ್ದಾರೆ ಎಂದು ವರದಿ ನೀಡಿದ್ದವು. ಮಾಧ್ಯಮಗಳ ಈ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಲ್ಯ, ಲಂಡನ್‌ ‌‌ನಲ್ಲಿ ಮಾಧ್ಯಮಗಳು ನನ್ನೊಂದಿಗೆ ಮಾತನಾಡುವ ಸಲುವಾಗಿ ಹುಡುಕಾಡುವ ಕೆಲಸ ಮಾಡುತ್ತಿದ್ದು ಇದರಿಂದ ಅವರ ಸಮಯ ವ್ಯರ್ಥ ಮಾಡಿಕೊಳ್ಳುವುದರ ಜತೆಗೆ ನನ್ನ ಸಮಯ ಸಹ ವ್ಯರ್ಥ ಮಾಡಲು ಹವಣಿಸುತ್ತಿವೆ. ಆದರೆ ನಾನು ಎಲ್ಲಿದ್ದೇನೆ ಎನ್ನುವುದನ್ನು ಪತ್ತೆ ಹಚ್ಚಲು ಅವರಿಂದ ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ, ನನಗೂ ಸಹ ಮಾಧ್ಯಮಗಳೊಂದಿಗೆ ಮಾತನಾಡುವ ಇರಾದೆ ಇಲ್ಲ. ಹಾಗಾಗಿ ಇಂತಹ ವ್ಯರ್ಥ ಪ್ರಯತ್ನ ಮಾಡಬೇಡಿ ಎಂದು ಟ್ವಿಟರ್‌ ‌‌ನಲ್ಲಿ ಹರಿಹಾಯ್ದಿದ್ದಾರೆ.

ವಿಶೇಷವೆಂದರೆ ಈಗಾಗಲೇ ಹೈದರಾಬಾದ್‌ ಕೋರ್ಟ್‌ ‌‌ನಿಂದ ವಿಜಯ್ ಮಲ್ಯಗೆ ಜಾಮೀನು ರಹಿತ ಅರೆಸ್ಟ್‌ ವಾರೆಂಟ್‌ ಜಾರಿಯಾಗಿದ್ದು, ಮಲ್ಯ ಅವರ ಬಂಧನಕ್ಕೆ ಸಂಬಂಧಿಸಿ ಅಧಿಕಾರಿಗಳು ಪ್ರಕ್ರಿಯೆ ಆರಂಭಿಸುವ ಸಾಧ್ಯತೆಯೂ ದಟ್ಟವಾಗಿದೆ. ಈ ನಡುವೆ ಮಲ್ಯ ಅವರ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದ್ದು, ಒಟ್ಟಾರೆ ಮಲ್ಯ ಮರಳಿ ಭಾರತಕ್ಕೆ ಬರುತ್ತಾರೆಯೋ ಎಂಬುದನ್ನು ಕಾಲವೇ ಉತ್ತರ ಹೇಳಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...