alex Certify
ಕನ್ನಡ ದುನಿಯಾ       Mobile App
       

Kannada Duniya

ಹೈಕೋರ್ಟ್ ನಲ್ಲಿ ನಲಪಾಡ್ ಜಾಮೀನು ಅರ್ಜಿ ವಿಚಾರಣೆ

ವಿದ್ವತ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಪರ ಹಾಗೂ ವಿರೋಧ ವಾದಗಳನ್ನು ನ್ಯಾಯಮೂರ್ತಿಗಳು ಆಲಿಸುತ್ತಿದ್ದಾರೆ. ವಕೀಲ ಸಿ.ವಿ.ನಾಗೇಶ್, ನಲಪಾಡ್ ಪರ ವಾದ ಮಂಡನೆ ಮಾಡ್ತಿದ್ದಾರೆ. ನಲಪಾಡ್ ಗೆ ಎಲ್ಲ ಪ್ರಕರಣದಲ್ಲೂ ಜಾಮೀನು ನೀಡಬೇಕೆಂದು ನಾಗೇಶ್ ವಾದ ಮಂಡನೆ ಮಾಡಿದ್ದಾರೆ.

ಅನಾಚಕ್ ಆಗಿ ನಡೆದು ಹೋಗಿರುವ ಘಟನೆ ಇದು. ಬಾಟಲ್ ಇಂದ ಹೊಡೆಯೋದು ಅಪರಾಧವಲ್ಲ ಎಂದು ನಾಗೇಶ್ ಹೇಳಿದ್ದಾರೆ. ಇದಕ್ಕೆ ನ್ಯಾಯಮೂರ್ತಿಗಳು ಬಾಟಲ್ ನಿಂದ ಕೊಲೆ ಮಾಡಬಹುದಲ್ಲ ಎಂದೂ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದ ನಾಗೇಶ್, ವಿದ್ವತ್ ಗೆ ಬಾಟಲ್ ನಿಂದ ಹಲ್ಲೆ ಮಾಡಲಾಗಿಲ್ಲ. ಯಾವುದೇ ಗಾಯವಾಗಿಲ್ಲ. ರಕ್ತ ಬಂದಿಲ್ಲ ಎಂದಿದ್ದಾರೆ.

ದೂರಿನ ಪ್ರತಿಯನ್ನು ನಾಗೇಶ್ ನ್ಯಾಯಮೂರ್ತಿಗಳ ಮುಂದೆ ಓದಿದ್ದಾರೆ. ಈ ಮಧ್ಯೆ ಆಸ್ಪತ್ರೆ ಡಿಸ್ಚಾರ್ಜ್ ಸಮರಿ ಹೇಗೆ ಆರೋಪಿ ಕೈಗೆ ಸಿಕ್ತು ಎಂದು ಎಸ್ ಪಿ ಪಿ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಕೋರ್ಟ್ ನಲ್ಲಿ ವಿಚಾರಣೆ ಮುಂದುವರೆದಿದ್ದು ತೀರ್ಪನ್ನು ಕಾಯ್ದಿರಿಸುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...