alex Certify
ಕನ್ನಡ ದುನಿಯಾ       Mobile App
       

Kannada Duniya

ಜೂ.17 ಕ್ಕೆ 11 ಮಂದಿ ವಿಧಾನಪರಿಷತ್ ಸದಸ್ಯರ ನಿವೃತ್ತಿ

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದ 11 ಮಂದಿ ಸದಸ್ಯರು ಜೂನ್ 17 ರಂದು ನಿವೃತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಸ್ಥಾನಗಳಿಗೆ ಜೂನ್ 11 ರಂದು ಚುನಾವಣೆ ನಡೆಯಲಿದೆ.

ವಿಧಾನಪರಿಷತ್ ಸದಸ್ಯರಾದ ಬಿಜೆಪಿಯ ಬಿ.ಜೆ. ಪುಟ್ಟಸ್ವಾಮಿ. ಡಿ.ಎಸ್. ವೀರಯ್ಯ ಸೋಮಣ್ಣ ಬೇವಿನಮರದ, ರಘುನಾಥ ಮಲ್ಕಾಪುರೆ, ಎಂ.ಬಿ. ಭಾನುಪ್ರಕಾಶ್, ಕಾಂಗ್ರೆಸ್ ನ ಎಂ.ಆರ್. ಸೀತಾರಾಮ್, ಮೋಟಮ್ಮ, ಸಿ.ಎಂ. ಇಬ್ರಾಹಿಂ, ಕೆ. ಗೋವಿಂದರಾಜು, ಜೆಡಿಎಸ್ ನ ಸಯ್ಯದ್ ಮುದೀರ್ ಆಗಾ ಹಾಗೂ ಪಕ್ಷೇತರರಾಗಿ ಆಯ್ಕೆಯಾಗಿದ್ದ ಬಿ.ಎಸ್. ಸುರೇಶ್ ಅವರುಗಳು ಜೂನ್ 17 ರಂದು ನಿವೃತ್ತಿಯಾಗುತ್ತಿದ್ದಾರೆ. ಸೋಮಣ್ಣ ಬೇವಿನಮರದ ಹಾಗೂ ಬಿ.ಎಸ್. ಸುರೇಶ್ ಈಗಾಗಲೇ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ

ಈ 11 ಸ್ಥಾನಗಳಿಗೆ ಜೂನ್ 11 ರಂದು ನಡೆಯುವ ಚುನಾವಣೆಗೆ ಕೇಂದ್ರ ಚುನಾವಣೆ ಆಯೋಗ ಪ್ರಕಟಣೆ ಹೊರಡಿಸಿದ್ದು, ಮೇ 24 ರಂದು ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಕೆಗೆ ಮೇ 31 ಅಂತಿಮ ದಿನವಾಗಿದ್ದು, ಜೂನ್ ಒಂದರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸಾತಿಗೆ ಜೂನ್ 4 ಕಡೆ ದಿನವಾಗಿದ್ದು, ಜೂನ್ 11 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಅಂದೇ ಸಂಜೆ 5 ಗಂಟೆ ನಂತರ ಮತ ಎಣಿಕೆ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...