alex Certify
ಕನ್ನಡ ದುನಿಯಾ       Mobile App
       

Kannada Duniya

ವಿಧಾನಪರಿಷತ್ ಸದಸ್ಯರಾಗಿ 11 ಮಂದಿ ಅವಿರೋಧ ಆಯ್ಕೆ

ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯಬೇಕಿದ್ದ ದ್ವೈವಾರ್ಷಿಕ ಚುನಾವಣೆಯಲ್ಲಿ 11 ಮಂದಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಎಂ.ಎಸ್. ಕುಮಾರಸ್ವಾಮಿ ವಿಧಾನ ಪರಿಷತ್ ಸದಸ್ಯರ ಆಯ್ಕೆಯನ್ನು ಘೋಷಣೆ ಮಾಡಿದ್ದು, 11 ಸ್ಥಾನಗಳ ಪೈಕಿ ಬಿಜೆಪಿಯಿಂದ ಐವರು, ಕಾಂಗ್ರೆಸ್ ನಿಂದ ನಾಲ್ವರು ಹಾಗೂ ಜೆಡಿಎಸ್ ನಿಂದ ಇಬ್ಬರು ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ತೇಜಸ್ವಿನಿಗೌಡ, ಎಸ್. ರುದ್ರೇಗೌಡ, ಕೆ.ಪಿ. ನಂಜುಂಡಿ ಹಾಗೂ ರಘುನಾಥ್ ಮಲ್ಕಾಪುರೆ, ಕಾಂಗ್ರೆಸ್ ನಿಂದ ಸಿ.ಎಂ. ಇಬ್ರಾಹಿಂ, ಹರೀಶ್ ಕುಮಾರ್ ಹಾಗೂ ಅರವಿಂದ ಕುಮಾರ್ ಅರಳಿ ಮತ್ತು ಜೆಡಿಎಸ್ ನಿಂದ ಬಿ.ಎಂ. ಫಾರೂಕ್ ಹಾಗೂ ಧರ್ಮೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 11 ಸ್ಥಾನಗಳಿಗೆ ಅವಿರೋಧ ಆಯ್ಕೆ ಯಾಗಿರುವ ಕಾರಣ ಜೂನ್ 11ರಂದು ನಿಗದಿಯಾಗಿದ್ದ ಚುನಾವಣೆ ನಡೆಯುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...