alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇವಸ್ಥಾನಕ್ಕೆ ಹೋಗುವವರು ಜೀನ್ಸ್ ತೊಡುವ ಹಾಗಿಲ್ಲ

VASTRA-SHASTRA

ಮಂಗಳೂರಿನ  ಶ್ರೀ ಮಂಗಲಾದೇವಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಯಾದ ಬೆನ್ನಲ್ಲೇ ಬೆಂಗಳೂರಿನ ಕಾಳಿಕಾಂಬಾ ದೇವಸ್ಥಾನದಲ್ಲಿ ವಸ್ತ್ರ ಶಾಸ್ತ್ರ ಕ್ರಮ ಆರಂಭಗೊಂಡಿದೆ.

ಕೆಂಗೇರಿಯ ಕಾಳಿಕಾಂಬಾ ದೇವಸ್ಥಾನದ ಹೊರವಲಯದಲ್ಲೇ ಎಂತಹ ವಸ್ತ್ರಗಳು ನಿಷೇಧ ಎಂಬುದನ್ನು ತಿಳಿಸಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಎಂತಹ ವಸ್ತ್ರವನ್ನು ಧರಿಸಬಾರದು ಎಂಬುದನ್ನು ಅವರೇ ತಿಳಿದಿರಬೇಕು. ಆದರೆ ಎಂತಹುದನ್ನು ಧರಿಸಿ ಬರಬೇಕು ಎಂಬುದನ್ನು ಇದರಲ್ಲಿ ಹೇಳಲಾಗಿದೆ.

ವಸ್ತ್ರ ಶಾಸ್ತ್ರದ ಮೂಲಕ ನಾವು ಜನರಲ್ಲಿ ಭಾರತದ ಸಂಪ್ರದಾಯದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಹಾಗಾಗಿ ಗಂಡಸರಿಗೆ ಪೈಜಾಮ ಅಥವಾ ಧೋತಿ ಹಾಗೂ ಹೆಂಗಸರಿಗೆ ಸೀರೆ ಅಥವಾ ಚೂಡಿ ಧರಿಸಿ ದೇವಸ್ಥಾನಕ್ಕೆ ಬರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೆಣ್ಣುಮಕ್ಕಳು ಶಾರ್ಟ್ಸ್, ಟೀ ಶರ್ಟ್, ಜೀನ್ಸ್ ಧರಿಸುವುದು ನಿಷಿದ್ಧ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...