alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತ್ ಶಾಗೂ ಕಾಡಿದ ವಿಜಯೇಂದ್ರ ಬೆಂಬಲಿಗರ ಭಯ

ಮೈಸೂರು: ಪ್ರಚಾರಕ್ಕಾಗಿ ವರುಣಾ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಬೇಕಿದ್ದ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಪ್ರವಾಸವನ್ನು ದಿಢೀರ್ ರದ್ದುಪಡಿಸಿದ್ದಾರೆ.

ವರುಣಾದಲ್ಲಿ ಬಿ.ಎಸ್.ವೈ. ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಿದ ಹಿನ್ನಲೆಯಲ್ಲಿ ಅವರ ಬೆಂಬಲಿಗರ ಆಕ್ರೋಶ ಮುಂದುವರೆದಿದೆ. ವರುಣಾದಲ್ಲಿ ಬಿ.ಜೆ.ಪಿ. ವಿರುದ್ಧವೇ ಬಿ.ಜೆ.ಪಿ. ಕಾರ್ಯಕರ್ತರು ಅಭಿಯಾನ ನಡೆಸಿದ್ದಾರೆ.

ನಿಗದಿಯಾಗಿದ್ದ ಕಾರ್ಯಕ್ರಮದಂತೆ ಅಮಿತ್ ಶಾ ಇಂದು ವರುಣಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಬೇಕಿತ್ತು. ಆದರೆ, ವಿಜಯೇಂದ್ರ ಬೆಂಬಲಿಗರು ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನಲೆಯಲ್ಲಿ ಮುಜುಗರದಿಂದ ತಪ್ಪಿಸಿಕೊಳ್ಳಲು ಅಮಿತ್ ಶಾ ವರುಣಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಅಮಿತ್ ಶಾ ಅವರಿಗೂ ವಿಜಯೇಂದ್ರ ಬೆಂಬಲಿಗರ ಭಯ ಕಾಡಿದ್ದು ಅವರು ವರುಣಾದಲ್ಲಿ ಪ್ರಚಾರ ನಡೆಸುತ್ತಿಲ್ಲ. ಬದಲಿಗೆ ಮೈಸೂರಿಗೆ ಆಗಮಿಸಿ ಪಿರಿಯಾಪಟ್ಟಣಕ್ಕೆ ತೆರಳಲಿದ್ದಾರೆ. ಅಲ್ಲಿಂದ ಟಿ.ನರಸೀಪುರದಲ್ಲಿ ಹಾಗೂ ಮೈಸೂರು ನಗರದ 3 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...