alex Certify
ಕನ್ನಡ ದುನಿಯಾ       Mobile App
       

Kannada Duniya

ತಮ್ಮ ಕಾರು ಗುಂಡಿಗಿಳಿದಾಗ್ಲೇ ಮೇಯರ್ ಗೆ ಅರ್ಥವಾಯ್ತು ಜನರ ವ್ಯಥೆ..!

ರಸ್ತೆ ಗುಂಡಿಗಳ ಸಮಸ್ಯೆ ಪ್ರಯಾಣಿಕರನ್ನ ಎಷ್ಟು ಕಂಗೆಡಿಸುತ್ತದೆ, ಜನಸಾಮಾನ್ಯರ ಜೀವಕ್ಕೆ ರಸ್ತೆ ಗುಂಡಿಗಳು ಎಷ್ಟು ಅಪಾಯಕಾರಿ ಅನ್ನೋದನ್ನ ಗುಜರಾತ್ ನ ವಡೋದರ ಮೇಯರ್ ಸ್ವ ಅನುಭವದಿಂದ ಅರ್ಥೈಸಿಕೊಂಡಿದ್ದಾರೆ.

ಇತ್ತೀಚೆಗೆ ವಡೋದರದಲ್ಲಿ ಭಾರೀ ಮಳೆ ಸುರಿದಿತ್ತು. ಆ ವೇಳೆ ಮೇಯರ್ ಭರತ್ ಡಂಗಾರ್ ಅವರ ಕಾರು ರಸ್ತೆಗುಂಡಿಯಲ್ಲಿ ಸಿಕ್ಕಿಹಾಕಿಕೊಂಡುಬಿಡ್ತು. ಸುರಿಯುವ ಮಳೆಯ ಮಧ್ಯೆಯೇ ಕಾರು ಲಘು ಅಪಘಾತಕ್ಕೊಳಗಾಯ್ತು. ಅಪಘಾತಕ್ಕೆ ಕಾರಣವೇನು ಗೊತ್ತಾ..? ಅದೇ ರಸ್ತೆ ಗುಂಡಿಗಳು.

ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡ ಕಾರಿನಿಂದ ಕೆಳಗಿಳಿಯೋಕು ಆಗದಂತಾ ಪರಿಸ್ಥಿತಿ ಮೇಯರ್ಗೆ ಎದುರಾಗಿತ್ತು. ಸುರಿವ ಮಳೆಯ ಮಧ್ಯೆ ರಸ್ತೆಯಲ್ಲೇ ಮೇಯರ್ ಒಂದಷ್ಟು ಕಾಲ ಕಳೆಯಬೇಕಾಯ್ತು. ಇಂತಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮೇಯರ್ ಸಿಕ್ಕಿಹಾಕಿಕೊಂಡಿದ್ದ ಫೊಟೋಗಳು ಮತ್ತು ವಡೋದರದ ರಸ್ತೆಗುಂಡಿಗಳ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಂತಾ ಪರಿಸ್ಥಿತಿಯಲ್ಲಾದ್ರು ಮೇಯರ್ ಸಾಹೇಬ್ರಿಗೆ ನಮ್ಮ ಕಷ್ಟ ಅರಿವಾಗಿದ್ದರೆ ಸಾಕು ಅಂತಿದ್ದಾರೆ ಸಾರ್ವಜನಿಕರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...