alex Certify
ಕನ್ನಡ ದುನಿಯಾ       Mobile App
       

Kannada Duniya

ಮರಳಿ ಜೈಲು ಸೇರಿದ ಶಶಿಕಲಾ

ಬೆಂಗಳೂರು: ಪೆರೋಲ್ ಮೇಲೆ ಹೊರ ಹೋಗಿದ್ದ ವಿ.ಕೆ. ಶಶಿಕಲಾ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮರಳಿದ್ದಾರೆ.

ಪತಿ ನಟರಾಜನ್ ಕರಳು, ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಆರೋಗ್ಯ ವಿಚಾರಿಸಲು 5 ದಿನಗಳ ಪೆರೋಲ್ ಪಡೆದು ಅವರು ತಮಿಳುನಾಡಿಗೆ ತೆರಳಿದ್ದರು.

ಅಕ್ಟೋಬರ್ 6 ರಂದು ಪೆರೋಲ್ ಪಡೆದುಕೊಂಡು ಚೆನ್ನೈಗೆ ತೆರಳಿದ್ದ ಅವರು, ಪತಿಯ ಆರೋಗ್ಯ ವಿಚಾರಿಸಿಕೊಂಡು ಜೈಲಿಗೆ ಮರಳಿದ್ದಾರೆ.

ಟಿ.ಟಿ.ವಿ. ದಿನಕರನ್ ಹಾಗೂ ಮೂವರು ಸಚಿವರೊಂದಿಗೆ ಆಗಮಿಸಿದ ಶಶಿಕಲಾ ಜೈಲಿನ ಒಳಗೆ ತೆರಳಿದ್ದಾರೆ. ಜೈಲಿಗೆ ಮರಳಿದ ಸಂದರ್ಭದಲ್ಲಿ ಜೈಲಿನ ವೈದ್ಯರು ಶಶಿಕಲಾ ಅವರ ಆರೋಗ್ಯ ತಪಾಸಣೆ ಮಾಡಿದ್ದಾರೆ.

ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಶಶಿಕಲಾ ಜೈಲು ಸೇರಿದ್ದಾರೆ. ಪತಿಯ ಅನಾರೋಗ್ಯದ ಕಾರಣ ಅವರಿಗೆ ನಿಬಂಧನೆಗಳೊಂದಿಗೆ ಪೆರೋಲ್ ನೀಡಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...