alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಗೆ ಬಿಜೆಪಿ ಸರ್ಟಿಫಿಕೇಟ್ ಬೇಕಿಲ್ಲ- ಖಾದರ್

ಬಿಜೆಪಿಯವರ ಸರ್ಟಿಫೀಕೆಟ್ ಕಾಂಗ್ರೆಸ್ ಗೆ ಅಗತ್ಯವಿಲ್ಲ. ಭಯೋತ್ಪಾದಕರನ್ನು ವಿಮಾನದಲ್ಲಿ ಕೊಂಡೊಯ್ದು ಅಘ್ಘಾನಿಸ್ತಾನದಲ್ಲಿ ಬಿಟ್ಟು ಬಂದವರು ಯಾರೆಂಬುದಕ್ಕೆ ಬಿಜೆಪಿ ಮುಖಂಡರು ಉತ್ತರ ನೀಡಬೇಕು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ. ಖಾದರ್ ಒತ್ತಾಯಿಸಿದರು.

ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾದ ಯು.ಟಿ.ಖಾದರ್  ಹಾಗೂ ರಮಾನಾಥ ರೈ ಭಯೋತ್ಪಾದಕರಿದ್ದಂತೆ ಎಂದು ಬಿಜೆಪಿ ಪದಾಧಿಕಾರಿ ರವಿಕುಮಾರ್ ಎಂಬುವರು ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ಹೇಳಿದ ಮಾತ್ರಕ್ಕೆ ನಾನು ಭಯೋತ್ಪಾದಕನಾಗಲಾರೆ, ಅದೇ ರೀತಿ ನನ್ನನ್ನು ದೇವರು ಎಂದು ಕರೆದರೂ ದೇವರಾಗಲಾರೆ ಎಂದು ತಿರುಗೇಟು ನೀಡಿದರು.

ಕಾಶ್ಮೀರ, ನಾಗಾಲ್ಯಾಂಡ್, ತ್ರಿಪುರಗಳಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಅಧಿಕಾರಕ್ಕಾಗಿ ಕೈ ಜೋಡಿಸಿರುವ ಬಿಜೆಪಿಗೆ ಕಾಂಗ್ರೆಸ್ ನ್ನು ಟೀಕಿಸುವ ನೈತಿಕ ಹಕ್ಕಿಲ್ಲ  ರಾಜ್ಯದ ಜನತೆಗೆ ಎಲ್ಲಾ ಗೊತ್ತಿದೆ. ತಮಗೆ ಬಿಜೆಪಿಯವರ ಸರ್ಟಿಫಿಕೇಟ್ ಬೇಡ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಪಿಡಿಪಿಯೊಂದಿಗೆ  ಕೈ ಜೋಡಿಸಿ ಅಧಿಕಾರ ಹಂಚಿಕೊಂಡಿರುವುದು ಏಕೆ ಎಂಬುದರ ಬಗ್ಗೆ ಜನರಿಗೆ ಉತ್ತರ ಕೊಡಲಿ. ತ್ರಿಪುರ, ನಾಗಾಲ್ಯಾಂಡ್ ಗಳಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಅಧಿಕಾರಕ್ಕಾಗಿ ಕೈ ಜೋಡಿಸಿರುವ ಬಿಜೆಪಿಗೆ ತಮ್ಮನ್ನು ಭಯೋತ್ಪಾದಕರು ಎಂದು ಕರೆಯುವ ಯಾವ ಹಕ್ಕು ಇಲ್ಲ . ಅಧಿಕಾರಕ್ಕಾಗಿ ಬಿಜೆಪಿಯವರು ಯಾರ ಜೊತೆಯಾದರೂ ಕೈ ಜೋಡಿಸುತ್ತಾರೆ. ಏನು ಬೇಕಾದರೂ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ  ಜನಪರ ಯೋಜನೆಗಳೊಂದಿಗೆ ಕೆಲಸ ಮಾಡುತ್ತಿದೆ. ಬಿಜೆಪಿಯವರಲ್ಲಿ ಚರ್ಚೆ ಮಾಡಲು ವಿಷಯಗಳಿಲ್ಲ. ಸರ್ಕಾರ ನೀಡಿದ  ಜನಪರ ಯೋಜನೆಗಳು, ಆಡಳಿತವನ್ನು ಟೀಕಿಸಲು ಏನೂ ಇಲ್ಲ. ಜನರನ್ನು ಒಡೆದು ಆಳುವ, ಆ ಮೂಲಕ ಮತಗಳನ್ನು  ಸಂಗ್ರಹಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.

ಕರಾವಳಿಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ. ಕೋಮುವಾದಿಗಳು ಕೋಮುಗಲಭೆ ಸೃಷ್ಟಿಸುವ ಎಲ್ಲಾ ಸಂಚು ವಿಫಲವಾಗಿವೆ. ಅವರು ಸಮಸ್ಯೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿಲ್ಲ. ಶವದ ಮೇಲೆ ರಾಜಕಾರಣ ಮಾಡುವ ಪ್ರಯತ್ನ ಫಲ ಕೊಡುತ್ತಿಲ್ಲ. ಸಿದ್ದರಾಮಯ್ಯ ಸರ್ಕಾ ರದ ಆಡಳಿತವನ್ನು ರಾಜ್ಯದ ಜನತೆ ಮೆಚ್ಚಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ ದಾಳಿ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದು, ಇದು ನ್ಯಾಯಾಲಯ ನೀಡಿರುವ ತೀರ್ಪು. ಇದರಲ್ಲಿ ಸರ್ಕಾರದ ಪಾತ್ರವಿಲ್ಲ. ಈ ಪ್ರಕರಣದ ಮೇಲ್ಮನವಿ ಸಲ್ಲಿಸುವ ಬಗ್ಗೆ ಸರ್ಕಾರ ಎಲ್ಲಾ ಕಾನೂನು ಸಾಧ್ಯತೆಗಳನ್ನು ಪರಿಶೀಲಿಸಲಿದೆ ಎಂದು ಪ್ರಶ್ನೆಯೊಂದಕ್ಕೆಉತ್ತರಿಸಿದರು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...