alex Certify
ಕನ್ನಡ ದುನಿಯಾ       Mobile App
       

Kannada Duniya

ವೈಟ್ ಹೌಸ್ ನಿಂದ ಸಾಂಗ್ಲಿಯಾನಗೆ ಬುಲಾವ್

po-sang

ಬೆಂಗಳೂರು: ಅಮೆರಿಕದ ಅಧಿಕಾರ ಕೇಂದ್ರ ಸ್ಥಾನ ವೈಟ್ ಹೌಸ್ ನಿಂದ, ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಅವರಿಗೆ ಕರೆ ಬಂದಿದೆ.

ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಾಷಿಂಗ್ಟನ್ ನಲ್ಲಿ ಫೆಬ್ರವರಿ 1 ಮತ್ತು 2 ರಂದು ಆಯೋಜಿಸಿರುವ ರಾಷ್ಟ್ರೀಯ ಪ್ರಾರ್ಥನಾ ಔತಣಕೂಟದಲ್ಲಿ ಭಾಗವಹಿಸುವಂತೆ, ಸಾಂಗ್ಲಿಯಾನ ಅವರನ್ನು ಆಹ್ವಾನಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಾಂಗ್ಲಿಯಾನ, ಪೊಲೀಸ್ ಇಲಾಖೆಯಲ್ಲಿ ಪತ್ತೆದಾರಿಕೆ ಕುರಿತಾಗಿ ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ.

ಹಿಂದೆಯೂ ಸಾಂಗ್ಲಿಯಾನ ಅಮೆರಿಕ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಗ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...