alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರರಂಗದ ಯಶಸ್ಸು ರಾಜಕಾರಣದಲ್ಲಿ ಸಿಗುತ್ತಾ..?

rajakrana-cinem-dd

ರಾಜಕೀಯ ಮತ್ತು ಚಿತ್ರರಂಗ ಬೇರೆ ಕ್ಷೇತ್ರಗಳಾದರೂ ಇವರೆಡಕ್ಕೂ ಅವಿನಾಭಾವ ಸಂಬಂಧವಿದೆ. ಚಿತ್ರರಂಗದಲ್ಲಿದ್ದವರು ರಾಜಕಾರಣದಲ್ಲಿ ಹಾಗೂ ರಾಜಕಾರಣದಲ್ಲಿರುವವರು ಚಿತ್ರರಂಗದಲ್ಲಿದ್ದಾರೆ.

ಭಾರತೀಯ ಚಿತ್ರರಂಗವನ್ನು ಗಮನಿಸಿದಾಗ, ಅಮಿತಾಬ್ ಬಚ್ಚನ್, ಚಿರಂಜೀವಿ, ಎನ್.ಟಿ.ಆರ್., ಎಂ.ಜಿ.ಆರ್., ಜಯಲಲಿತಾ, ಅನಂತ್ ನಾಗ್, ಅಂಬರೀಶ್, ಜಗ್ಗೇಶ್, ಜಯಪ್ರದಾ, ಜಯಾ ಬಚ್ಚನ್, ವಿನೋದ್ ಖನ್ನಾ, ಗೋವಿಂದ, ರೂಪಾ ಗಂಗೂಲಿ, ರಮ್ಯಾ ಹೀಗೆ ಹಲವರು ರಾಜಕಾರಣದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರಿಗೆ ಯಶಸ್ಸು ಸಿಕ್ಕರೆ ಮತ್ತೆ ಕೆಲವರಿಗೆ ಯಶಸ್ಸು ದೂರದ ಮಾತಾಗಿದೆ.

ಇನ್ನು ರಾಜಕಾರಣದಲ್ಲಿರುವವರು ಕೂಡ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ರಾಮಕೃಷ್ಣ ಹೆಗ್ಡೆ, ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವಾರು ನಾಯಕರು ಚಿತ್ರರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.

ಹಿಂದೆಲ್ಲಾ ಪ್ರಚಾರಕ್ಕೆ ಸಿನಿಮಾ ನಟರು ಆಗಮಿಸುತ್ತಿದ್ದರು. ರಾಜಕೀಯ ಪ್ರಕ್ಷಗಳು ಪ್ರಚಾರದ ಸಂದರ್ಭದಲ್ಲಿ ಜನರನ್ನು ಸೆಳೆಯಲು ಸಿನಿಮಾ ಕಲಾವಿದರನ್ನು ಬಳಸಿಕೊಳ್ಳುತ್ತಿದ್ದರು.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಅನಂತ್ ನಾಗ್, ಅಂಬರೀಶ್, ಜಗ್ಗೇಶ್, ರಮ್ಯಾ, ಭಾವನಾ, ಜಯಮಾಲಾ, ತಾರಾ, ಶಶಿಕುಮಾರ್ ಇನ್ನೂ ಹಲವಾರು ಮಂದಿ ರಾಜಕಾರಣದಲ್ಲಿಯೂ ಮಿಂಚಿದ್ದಾರೆ.

ಆಂಧ್ರಪ್ರದೇಶದಲ್ಲಿ ಎನ್.ಟಿ.ಆರ್., ತಮಿಳುನಾಡಿನಲ್ಲಿ ಎಂ.ಜಿ.ಆರ್., ಜಯಲಲಿತಾ, ಕರುಣಾನಿಧಿ ಮುಖ್ಯಮಂತ್ರಿಗಳಾಗಿದ್ದಾರೆ. ಕರ್ನಾಟಕದಲ್ಲಿ ಅಂತಹ ಅವಕಾಶ ಡಾ. ರಾಜ್ ಕುಮಾರ್ ಅವರಿಗೆ ಇತ್ತಾದರೂ ಅವರು ಮಾತ್ರ ರಾಜಕೀಯದಿಂದ ದೂರವೇ ಉಳಿದರು.

ಈಗ ತಮಿಳುನಾಡಿನಲ್ಲಿ ರಜನಿಕಾಂತ್ ಮತ್ತು ಕಮಲ ಹಾಸನ್ ಅವರ ರಾಜಕೀಯ ಪ್ರವೇಶದ ಕುರಿತಾಗಿ ವ್ಯಾಪಕ ಚರ್ಚೆಯಾಗುತ್ತಿದೆ.

ಚಿರಂಜೀವಿ ಹೊಸ ಪಕ್ಷವನ್ನು ಕಟ್ಟಿದ್ದರೂ ಯಶಸ್ಸು ಕಾಣದೇ ಕಾಂಗ್ರೆಸ್ ಸೇರಿದ್ದರು. ಈಗ ಚಿತ್ರರಂಗಕ್ಕೆ ಮರಳಿದ್ದಾರೆ. ದೇಶದ ರಾಜಕಾರಣ ಹಲವಾರು ಮಗ್ಗುಲುಗಳನ್ನು ಬದಲಿಸಿದೆ. ಇದೇ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಹೊಸ ಚಿಂತನೆಯೊಂದಿಗೆ ರಾಜಕಾರಣ ಪ್ರವೇಶಿಸಿದ್ದಾರೆ. ಅವರಿಗೆ ಯಶಸ್ಸು ಸಿಗುತ್ತಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...