alex Certify
ಕನ್ನಡ ದುನಿಯಾ       Mobile App
       

Kannada Duniya

ಐದು ರೂ. ಟೀ ಕುಡಿದ್ರೆ 30 ನಿಮಿಷ ನೆಟ್ ಉಚಿತ..!

2_1477037749

ಬಳ್ಳಾರಿಯ ಸಿರಗುಪ್ಪದ ಚಹಾ ಅಂಗಡಿಯೊಂದು ಗ್ರಾಹಕರನ್ನು ಸೆಳೆಯುತ್ತಿದೆ. ಒಂದು ತಿಂಗಳಲ್ಲಿ ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿದೆ. ಇದಕ್ಕೆ ಕಾರಣವಾಗಿರೋದು ಉಚಿತ ವೈಫೈ.

23 ವರ್ಷದ ಸಯ್ಯದ್ ಖಾದರ್ ಟೀ ಅಂಗಡಿ  ನಡೆಸ್ತಿದ್ದಾರೆ. ಇವರ ಟೀ ಅಂಗಡಿಯಲ್ಲಿ 5 ರೂಪಾಯಿ ಟೀ ಕುಡಿದ್ರೆ 30 ನಿಮಿಷ ಉಚಿತ ವೈಫೈ ಪಡೆಯಬಹುದಾಗಿದೆ. ಸೆಪ್ಟೆಂಬರ್ ನಲ್ಲಿ ಶುರುವಾಗಿರುವ ಈ ಯೋಜನೆ ಕ್ಲಿಕ್ ಆಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಜನರು ಕ್ಯೂನಲ್ಲಿ ನಿಂತು ಟೀ ಕುಡಿಯುತ್ತಿದ್ದಾರೆ.

ಸ್ಥಳೀಯ ಕೇಬಲ್ ಆಯೋಜಕರಿಂದ ವೈಫೈ ಹಾಗೂ ಅನ್ ಲಿಮಿಡೆಟ್ ಡಾಟಾ ಪ್ಲಾನ್ ಖರೀದಿ ಮಾಡಿದ್ದಾರೆ ಸಯ್ಯದ್. ಚಹಾ ಕುಡಿಯಲು ಬರುವವರಿಗೆ ವೈಫೈ ಪಾಸ್ ವರ್ಡ್ ಹಾಗೂ ಕೂಪನ್ ಕೊಡಲಾಗುತ್ತದೆ. ನೆಟ್ ಬಳಸಿ 30 ನಿಮಿಷವಾಗ್ತಿದ್ದಂತೆ ವೈಫೈ ಬಂದ್ ಆಗುತ್ತೆ.

ಬೆಂಗಳೂರಿನಂತ ಸಿಟಿಯಲ್ಲಿ ಉಚಿತ ವೈಫೈ ದೊಡ್ಡ ವಿಚಾರವಲ್ಲ. ಆದ್ರೆ ಸಿರಗುಪ್ಪಾದಂತ ಸಣ್ಣ ಪಟ್ಟಣದಲ್ಲಿ ಉಚಿತ ವೈಫೈ ಒಂದೊಳ್ಳೆ ಬ್ಯುಸಿನೆಸ್ ಎನ್ನುತ್ತಾರೆ ಸಯ್ಯದ್. ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ. ಕೇವಲ 100 ರೂಪಾಯಿ ಪಾಕೆಟ್ ಮನಿ ಪಡೆಯುವ ವಿದ್ಯಾರ್ಥಿಗಳಿಗೆ ನೆಟ್ ಪ್ಯಾಕೇಜ್ ಹಾಕಿಸಿಕೊಳ್ಳೋದು ಕಷ್ಟ. ಅಂತವರು 5 ರೂಪಾಯಿ ಟೀ ಕುಡಿದು 30 ನಿಮಿಷ ನೆಟ್ ಬಳಸ್ತಾರೆ. ಈ ಯೋಜನೆಗಿಂತ ಮೊದಲು ಪ್ರತಿದಿನ 10-15 ಮಂದಿ ಟೀ ಕುಡಿಯುತ್ತಿದ್ದರಂತೆ. ಆದ್ರೀಗ 100 ಮಂದಿ ಪ್ರತಿದಿನ ಟೀ ಕುಡಿಯುತ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...