alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರ್ಟ್ಸ್, ಬರ್ಮುಡಾ ಧರಿಸಿದವರಿಗಿಲ್ಲ ಗೋಕರ್ಣ ದೇಗುಲ ಪ್ರವೇಶ

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಪ್ರವೇಶಕ್ಕೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಶಾರ್ಟ್ಸ್, ಬರ್ಮುಡಾ ಧರಿಸಿ ಬಂದವರಿಗೆ ದೇಗುಲ ಪ್ರವೇಶವಿಲ್ಲವೆಂದು ಮುಜರಾಯಿ ಇಲಾಖೆ ಮೂಲಗಳು ತಿಳಿಸಿವೆ.

ಗೋಕರ್ಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಇವರುಗಳು ಸಭ್ಯವಲ್ಲದ ವಸ್ತ್ರಗಳನ್ನು ಧರಿಸಿ ದೇವಸ್ಥಾನಕ್ಕೂ ಭೇಟಿ ನೀಡುತ್ತಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಾಂಪ್ರದಾಯಿಕ ಉಡುಪುಗಳಾದ ಧೋತಿ, ಪಂಚೆ, ಸೀರೆ ಸೇರಿದಂತೆ ಸಭ್ಯ ಉಡುಪುಗಳನ್ನು ಧರಿಸಿ ಆಗಮಿಸುವವರಿಗೆ ದೇವಸ್ಥಾನದ ಭೇಟಿಗೆ ಅವಕಾಶ ನೀಡಲಾಗುವುದು ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...