alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆ ಮನೆ ಮಾಡಿ ಬಿಜೆಪಿಗೆ ಟಾಂಗ್ ಕೊಟ್ಟ ಉಗ್ರಪ್ಪ

ಬಳ್ಳಾರಿ: ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ವಿಶ್ವೇಶ್ವರಯ್ಯ ನಗರದಲ್ಲಿ ಬಾಡಿಗೆ ಮನೆ ತೆಗೆದುಕೊಂಡಿದ್ದಾರೆ. ಶುಕ್ರವಾರ ಬಾಡಿಗೆ ಮನೆಯಲ್ಲಿ ಪೂಜೆ ಮಾಡಿದ ಉಗ್ರಪ್ಪ ಶಾಶ್ವತವಾಗಿ ಇಲ್ಲೇ ಇರುತ್ತೇನೆ ಎಂದು ಕೂಡ ಹೇಳಿದ್ದಾರೆ.

ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಉಗ್ರಪ್ಪ ಹೆಸರು ಘೋಷಣೆಯಾದಾಗಿನಿಂದ ಬಿಜೆಪಿಯವರು ಅಡ್ರೆಸ್ ಇಲ್ಲದ ಉಗ್ರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ ಎಂದೇ ಮೂದಲಿಸುತ್ತಿದ್ದರು. ಹಾಗಾಗಿ ಉಗ್ರಪ್ಪ ಬಾಡಿಗೆ ಮನೆ ತೆಗೆದುಕೊಂಡಿದ್ದಾರೆನ್ನಲಾಗಿದೆ.

ಹಾಗೇ ಈ ಮನೆಯಲ್ಲಿಯೇ ವಾಸ ಮಾಡಿ ಜಿಲ್ಲೆಯ ಜನರ ಸಮಸ್ಯೆಗಳನ್ನು ಅರಿಯುತ್ತಾರಂತೆ. ಚುನಾವಣೆಯ ನಂತರವು ಇದೇ ಮನೆಯಲ್ಲಿ ಇದ್ದು, ಫಲಿತಾಂಶ ಏನೇ ಬಂದರೂ ಈ ಮನೆಯಲ್ಲಿಯೇ ಇರುತ್ತೇನೆ ಎಂದು ಉಗ್ರಪ್ಪ ಹೇಳಿದ್ದಾರೆ.

ಹಾಗೇ ಮೂದಲಿಸುವರ ಮಾತಿಗಾಗಿ ಉಗ್ರಪ್ಪ ಮನೆ ಮಾಡಿಲ್ಲವಂತೆ. ಹಾಗೇ ಅಡ್ರೆಸ್ ಯಾರಿಗೆ ಇತ್ತು, ಇಲ್ಲಾ ಎಂಬುದನ್ನು ಅವರೇ ಪ್ರಶ್ನೆ ಮಾಡಿಕೊಳ್ಳಲಿ ಎಂದು ಪರೋಕ್ಷವಾಗಿ ಶ್ರೀರಾಮುಲು ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ ಉಗ್ರಪ್ಪ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...