alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ವರ್ಷಾರಂಭ ಯುಗಾದಿ ಹಬ್ಬದ ಮಹತ್ವ

ಯುಗ + ಆದಿ ಯಗಾದಿ ಎಂದ್ರೆ ಹೊಸ ವರ್ಷದ ಆರಂಭವೆಂದರ್ಥ. ಚೈತ್ರ ಮಾಸದ ಶುದ್ಧ ಪಾಡ್ಯಮಿಯಂದು ಯುಗಾದಿಯಾಗಿ ಆಚರಣೆ ಮಾಡಲಾಗುತ್ತದೆ. ಪುರಾಣದ ಪ್ರಕಾರ ಸೃಷ್ಟಿಕರ್ತ ಬ್ರಹ್ಮ ಈ ಶುಭ ದಿನದಂದು ಬ್ರಹ್ಮಾಂಡವನ್ನು ಸೃಷ್ಟಿಸಿದನು ಎಂದು ನಂಬಲಾಗಿದೆ. ತ್ರೇತಾಯುಗದಲ್ಲಿ ಶ್ರೀರಾಮ ರಾವಣನನ್ನು ವಧಿಸಿ ಲಂಕೆಯಿಂದ ಮರಳಿ ಬಂದ ದಿನವಿದು ಎಂದೂ ಹೇಳಲಾಗುತ್ತದೆ. ಇದಲ್ಲದೆ ಬೆಳಕಾಗಿರುವ ಸೂರ್ಯ ತನ್ನ ಸ್ಥಾನ ಬದಲಿಸುತ್ತಾನೆ. ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧಕ್ಕೆ ಬದಲಾಗುತ್ತಾನೆ.

ಚಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದವಿದೆ. ಚಂದ್ರನ ಚಲನೆ ಆಧರಿಸಿ ದಿನಗಣನೆ ಮಾಡುವುದನ್ನು ಚಂದ್ರಮಾನ ಹಾಗೂ ಸೂರ್ಯನ ಚಲನೆ ಆಧರಿಸಿ ದಿನಗಣನೆ ಮಾಡುವುದನ್ನು ಸೌರಮಾನ ಎಂದು ಕರೆಯಲಾಗುತ್ತದೆ.

ಕರ್ನಾಟಕದಲ್ಲಿ ಚಂದ್ರಮಾನ ಪದ್ಧತಿ ಜಾರಿಯಲ್ಲಿದೆ. ವೇದಾಂಗ ಜ್ಯೋತಿಷ್ಯದಂತೆ ಮೊದಲ ನಕ್ಷತ್ರ ಅಶ್ವಿನಿ. ಅಶ್ವಿನಿ ನಕ್ಷತ್ರಕ್ಕೆ ರವಿ ಪ್ರವೇಶವನ್ನು ಹೊಸ ವರ್ಷವೆಂದು ಕರೆಯಲಾಗುತ್ತದೆ. ಯುಗಾದಿಯಿಂದ ವಸಂತ ಮಾಸ ಆರಂಭವಾಗುತ್ತದೆ. ಗಿಡ-ಮರಗಳು ಚಿಗುರೊಡೆಯುತ್ತವೆ. ಯುಗಾದಿ ನಂತ್ರ ಸೌರಮಾನ ಪಂಚಾಂಗ ಆಧರಿಸಿ ಬರುವ ಹೊಸ ವರ್ಷವನ್ನು ತಮಿಳುನಾಡಿನಲ್ಲಿ ಪುಥಾಂವು, ಅಸ್ಸಾಂನಲ್ಲಿ ಬಿಹು, ಪಂಜಾಬ್ ನಲ್ಲಿ ಬೈಸಾಕಿ ಹೆಸರಿನಿಂದ ಆಚರಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...