alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀ ಕೃಷ್ಣಮಠಕ್ಕೆ ಹೋಗದ ಸಿಎಂ: ಕಾರಣ ತಿಳಿಸಿದ ಪೇಜಾವರ ಶ್ರೀ

ಉಡುಪಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉಡುಪಿಗೆ ಹೋದರೂ, ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡದಿರುವ ಬಗ್ಗೆ ಕಾರಣವೇನು ಎಂಬುದನ್ನು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಸಿದ್ಧರಾಮಯ್ಯ ಅವರ ಮೇಲೆ ಬುದ್ಧಿಜೀವಿಗಳ ಒತ್ತಡವಿರುವ ಕಾರಣ, ಅವರು ಕೃಷ್ಣಮಠಕ್ಕೆ ಬರಲಿಲ್ಲ ಎಂದು ಹೇಳಿದ್ದಾರೆ.

ಸಿದ್ಧರಾಮಯ್ಯ ಹಾಗೂ ನಾವು ಹಲವಾರು ಸಲ ಭೇಟಿ ಮಾಡಿ ಮಾತನಾಡಿದ್ದೇವೆ. ಅವರ ಮೇಲೆ ಬುದ್ಧಿಜೀವಿಗಳು ಕೃಷ್ಣಮಠಕ್ಕೆ ಹೋಗದಂತೆ ಒತ್ತಡ ಹೇರಿದ್ದಾರೆ. ಕೆಲವರಿಗೆ ಕೃಷ್ಣಮಠ ಮತ್ತು ನಾನೆಂದರೆ ಆಗುವುದಿಲ್ಲ ಎಂದಿದ್ದಾರೆ.

ಸಿದ್ಧರಾಮಯ್ಯನವರಿಗೆ ಹಿಂದೆಯೇ ಹಲವು ಸಲ ಆಹ್ವಾನ ನೀಡಿದ್ದೆವು. ಅವರು ಬಾರದ ಕಾರಣ ಮತ್ತೆ ಆಹ್ವಾನಿಸಿಲ್ಲ ಎಂದು ತಿಳಿಸಿದ್ದಾರೆ. ಭಾನುವಾರ ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸಿದ್ಧರಾಮಯ್ಯ ಮಠಕ್ಕೆ ಹೋಗಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...