alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್! ಸಾವಿಗೆ ಕಾರಣವಾಯ್ತು ಮೊಡವೆ ಔಷಧ

ಉಡುಪಿ: ಮುಖದ ಮೇಲಿನ ಮೊಡವೆಯ ನಿವಾರಣೆಗೆ ಔಷಧ ಸೇವಿಸಿದ ವಿದ್ಯಾರ್ಥಿನಿ ಸಾವು ಕಂಡ ಆಘಾತಕಾರಿ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಮುಖದ ಮೇಲೆ ಹೆಚ್ಚಾಗಿ ಮೊಡವೆಗಳಾಗಿವೆ. ಮೊಡವೆಗಳ ನಿವಾರಣೆಗೆ ವಿದ್ಯಾರ್ಥಿನಿ ಏನೆಲ್ಲಾ ಪ್ರಯತ್ನಿಸಿದರೂ, ಕಡಿಮೆಯಾಗಿಲ್ಲವಾದ್ದರಿಂದ ಸ್ಥಳೀಯ ಆಯುರ್ವೇದ ವೈದ್ಯರೊಬ್ಬರನ್ನು ಸಂಪರ್ಕಿಸಿದ್ದಾರೆ.

ವೈದ್ಯರ ಸಲಹೆಯಂತೆ ಔಷಧ ಪಡೆದುಕೊಂಡಿದ್ದು, ಅದು ಓವರ್ ಡೋಸ್ ಆಗಿ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಮಣಿಪಾಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...