alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.ಸಿ., ಎ.ಸಿ. ಸೇರಿ ಹಲವರ ಕೊಲೆಗೆ ಯತ್ನ

udupi-d

ಉಡುಪಿ: ಅಕ್ರಮ ಮರಳು ದಂಧೆಕೋರರು ಅಟ್ಟಹಾಸ ಮೆರೆದಿದ್ದು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ಅಧಿಕಾರಿಗಳನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ, ಕುಂದಾಪುರ ಎ.ಸಿ. ಶಿಲ್ಪಾ ನಾಗ್ ಅವರ ಪತಿ ಶಂಕರ್, ಡಿ.ಸಿ. ಗನ್ ಮ್ಯಾನ್ ಪೃಥ್ವಿರಾಜ್ ಜೋಗಿ ಸೇರಿ ಹಲವರ ಮೇಲೆ ಹಲ್ಲೆ ನಡೆಸಲಾಗಿದೆ.

ಉಡುಪಿ ಠಾಣೆಗೆ ಈ ಸಂಬಂಧ ದೂರು ನೀಡಲಾಗಿದೆ. ಕುಂದಾಪುರ ಸಮೀಪದ ಕಂಡ್ಲೂರು, ಹುಳಿಬೆಟ್ಟು ಮೊದಲಾದ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ರಾತ್ರಿ ದಿಢೀರ್ ದಾಳಿ ನಡೆಸಲಾಗಿದೆ.

ಆಗ 50 ಕ್ಕೂ ಅಧಿಕ ಅಕ್ರಮ ಮರಳು ದಂಧೆಕೋರರು ಅಟ್ಟಹಾಸ ಮೆರೆದು ದಾಳಿ ಮಾಡಿದ ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...