alex Certify
ಕನ್ನಡ ದುನಿಯಾ       Mobile App
       

Kannada Duniya

ಕೃಷ್ಣಮಠದಲ್ಲಿ ಇಫ್ತಾರ್ ಕೂಟ ಸರಿಯಲ್ಲ ಎಂದ ಮುತಾಲಿಕ್

mutalikd-dd

ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಮುಸ್ಲಿಮರಿಗೆ ಪ್ರವೇಶ ನೀಡಿ, ಇಫ್ತಾರ್ ಕೂಟ ಆಯೋಜಿಸಿದ್ದು ಸರಿಯಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಕೃಷ್ಣಮಠಕ್ಕೆ ಭೇಟಿ ನೀಡಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಅವರು, ಮಠದೊಳಗೆ ಮುಸಲ್ಮಾನರಿಗೆ ಪ್ರವೇಶ ನೀಡಿ, ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಗೋಮಾಂಸ ಸೇವಿಸುವವರಿಗೆ ಮಠದೊಳಗೆ ಪ್ರವೇಶ ನೀಡಲಾಗಿದೆ. ಇದು ಹೋರಾಟ ನಡೆಸುವ ಹಿಂದೂ ಸಮಾಜದವರಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದ್ದಾರೆ.

ಇದಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುತಾಲಿಕ್, ಕೃಷ್ಣಮಠದಲ್ಲಿ ಮುಸಲ್ಮಾನರಿಗೆ ಅವಕಾಶ ನೀಡುವ ಮೂಲಕ ಹಿಂದೂ ಸಮಾಜಕ್ಕೆ ಅವಮಾನ ಮಾಡಲಾಗಿದೆ. ಶ್ರೀಗಳು ನೀಡುತ್ತಿರುವ ಸಮರ್ಥನೆ ಸರಿಯಾಗಿಲ್ಲ. ಜುಲೈ 2 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀಗಳು, ಧರ್ಮನಿಷ್ಠ, ಪರಧರ್ಮ ಸಹಿಷ್ಣುತೆ ಬಗ್ಗೆ ಏನು ಮಾಡಬೇಕೆಂಬುದು ನನಗೆ ಗೊತ್ತಿದೆ. ಹಿಂದೂ ಧರ್ಮಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ನಾನು ಹೋರಾಡಿದ್ದೇನೆ. ಹಿಂದೂಗಳು ಉದಾರಿಗಳು, ಪರಧರ್ಮ ಸಹಿಷ್ಣುಗಳು ಎಂಬುದನ್ನು ತೋರಿಸಿಕೊಡುವ ಭಾಗವಾಗಿಯೇ ರಂಜಾನ್ ಸತ್ಕಾರ ಕೂಟ ಏರ್ಪಡಿಸಲಾಗಿತ್ತು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...