alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮುಕರ ಕಾಟಕ್ಕೆ ದುಡುಕಿದ ವಿದ್ಯಾರ್ಥಿನಿ

udupi-dd

ಉಡುಪಿ: ಅಪ್ರಾಪ್ತೆಗೆ ಲವ್ ಮಾಡುವಂತೆ ಮೂವರು ಯುವಕರು ಕಿರುಕುಳ ನೀಡಿದ್ದು, ಇದರಿಂದ ಮನನೊಂದ ಅಪ್ರಾಪ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಅಮಾಸೆಬೈಲು ನಿವಾಸಿಯಾಗಿರುವ 17 ವರ್ಷದ ಯುವತಿಗೆ ಪ್ರಸಾದ್, ಪ್ರಶಾಂತ್ ಹಾಗೂ ವಿನಯ್ ಎಂಬುವವರು ಲವ್ ಮಾಡುವಂತೆ ಪೀಡಿಸಿದ್ದಾರೆ.

ಮೊಬೈಲ್ ಗೆ ಮೆಸೇಜ್, ಕಾಲ್ ಮಾಡುವ ಮೂಲಕ ಕಿರುಕುಳ ನೀಡಿದ್ದಾರೆ. ಯುವತಿ ಹೊಲಿಗೆ ತರಬೇತಿಗೆಂದು ಹೋದ ಸಂದರ್ಭದಲ್ಲಿ ಈ ಮೂವರು ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ.

ಕಾಮುಕರ ಕಾಟದಿಂದ ಬೇಸತ್ತ ಆಕೆ ಇಲಿ ಪಾಷಣ ಸೇವಿಸಿದ್ದು, ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಇದಾದ ನಂತರ ಮೂವರು ಯುವಕರು ನಾಪತ್ತೆಯಾಗಿದ್ದು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...