alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಲಿನಲ್ಲಿ ಈಜಾಡಿದ ಸಚಿವ ಯು.ಟಿ.ಖಾದರ್

khadar

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಸಮುದ್ರದಲ್ಲಿ ಈಜಾಡುವ ಮೂಲಕ ಗಮನ ಸೆಳೆದಿದ್ದಾರೆ. ಬೆಳಿಗ್ಗೆಯೇ, ಕಡಲ ತೀರಕ್ಕೆ ಬಂದ ಸಚಿವರು, ಅಲ್ಲಿದ್ದ ಮಕ್ಕಳೊಂದಿಗೆ ಬೆರೆತರಲ್ಲದೇ, ಅವರೊಂದಿಗೆ ಈಜಾಡಿದರು.

ಮಂಗಳೂರಿನ ಉಳ್ಳಾಲದ ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ಬೇಸಿಗೆ ಈಜು ತರಬೇತಿ ಶಿಬಿರ ಆಯೋಜಿಸಿದ್ದು, ಸುಮಾರು 250ಕ್ಕೂ ಅಧಿಕ ಮಕ್ಕಳು ಈಜು ಕಲಿಯಲು ಬಂದಿದ್ದರು. ಶಿಬಿರಕ್ಕೆ ಚಾಲನೆ ನೀಡಿದ ಸಚಿವ ಖಾದರ್, ಮಕ್ಕಳೊಂದಿಗೆ ತಾವೂ ಈಜಾಡುವ ಮೂಲಕ ಗಮನಸೆಳೆದರು. ಈಜು ಕಲಿಯುವುದರಿಂದ ವ್ಯಾಯಾಮ ಮಾಡಿದಂತಾಗುತ್ತದೆ. ಆರೋಗ್ಯವೂ ವೃದ್ಧಿಸುತ್ತದೆ. ಅಪಾಯದ ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಮಕ್ಕಳು ಈಜು ಕಲಿಯಿರಿ, ಸುರಕ್ಷಿತರಾಗಿರಿ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸಚಿವರು ಮಾತನಾಡಿ, ಚಿಕ್ಕವರಿದ್ದ ಸಂದರ್ಭದಲ್ಲಿ ಗೆಳೆಯನೊಂದಿಗೆ ಈಜಾಡಿದ್ದನ್ನು, ಬಾಲ್ಯದ ಗೆಳೆಯ ಮೃತಪಟ್ಟಿದ್ದನ್ನು ನೆನಪಿಸಿಕೊಂಡರು. ಸಚಿವರು ಈಜಾಡಿದ್ದನ್ನು ಕಂಡ ಮಕ್ಕಳು ಕೂಡ ಖುಷಿಯಿಂದ ಸಮುದ್ರದಲ್ಲಿ ಈಜಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...