alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ಕ್ರೇಜ್ ಗೆ ಟೆಕ್ಕಿಗಳಿಬ್ಬರ ಬಲಿ

ಪ್ರತಿ ವರ್ಷವೂ ಬಹಳಷ್ಟು ಮಂದಿ ಸೆಲ್ಪಿ ಹುಚ್ಚಿನಿಂದಾಗಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಸೆಲ್ಪಿ ಹುಚ್ಚಿನಿಂದ ಜೀವ ಕಳೆದುಕೊಂಡ ಮತ್ತೊಂದು ಘಟನೆ ಮೇಕೆದಾಟಿನಲ್ಲಿ ನಡೆದಿದೆ.

ಬೀದರ್ ಮೂಲದ ಇಬ್ಬರು ಯುವಕರು ಸೆಲ್ಪಿ ಹುಚ್ಚಿನಿಂದಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರೆಹಮಾನ್(29) ಮತ್ತು ಭವಾನಿ ಶಂಕರ್(29) ಎಂಬ ಇಬ್ಬರು ಸ್ನೇಹಿತರು ಬೆಂಗಳೂರಿನ ಖಾಸಗಿ ಕಂಪನಿಯ ಸಾಫ್ಟ್ ವೇರ್ ಉದ್ಯೋಗಿಗಳಾಗಿದ್ದು, ವಾರದ ರಜೆ ನಿಮಿತ್ತ ಇಬ್ಬರೂ ಮೇಕೆದಾಟಿಗೆ ತೆರಳಿದ್ದರು.

ರೆಹಮಾನ್ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾನೆ. ಸ್ನೇಹಿತನನ್ನು ರಕ್ಷಿಸಲು ಭವಾನಿ ಶಂಕರ್ ಕೂಡ ನೀರಿಗೆ ಇಳಿದಿದ್ದು, ನೀರಿನ ರಭಸಕ್ಕೆ ಇಬ್ಬರು ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...