alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ಆಗಸದಲ್ಲಿ ತಪ್ಪಿದ ಭಾರಿ ಅನಾಹುತ

ಮಂಗಳವಾರದಂದು ಬೆಂಗಳೂರು ಆಗಸದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ. ಎರಡು ವಿಮಾನಗಳು ಡಿಕ್ಕಿ ಹೊಡೆಯುವ ಸನ್ನಿವೇಶ ಎದುರಾದಾಗ ತಕ್ಷಣವೇ ವಿಮಾನ ನಿಲ್ದಾಣದ ನಿಯಂತ್ರಣಾಧಿಕಾರಿಗಳು ಎರಡು ವಿಮಾನಗಳ ಪೈಲೆಟ್ ಗಳಿಗೆ ಮಾಹಿತಿ ನೀಡಿ ದುರಂತ ತಪ್ಪಿಸಿದ್ದಾರೆ.

ಇಂಡಿಗೋ ಸಂಸ್ಥೆಗೆ ಸೇರಿದ ಕೊಯಮತ್ತೂರು-ಹೈದರಾಬಾದ್ ವಿಮಾನ ಹಾಗೂ ಬೆಂಗಳೂರು- ಕೊಚ್ಚಿ ವಿಮಾನಗಳ ನಡುವೆ ಡಿಕ್ಕಿ ಸಂಭವಿಸುತ್ತಿತ್ತೆಂದು ಹೇಳಲಾಗಿದ್ದು, ಎರಡು ವಿಮಾನಗಳಲ್ಲಿ ಒಟ್ಟು 330 ಮಂದಿ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ.

ಘಟನೆ ಕುರಿತು ಈಗ ತನಿಖೆಗೆ ಆದೇಶಿಸಲಾಗಿದ್ದು, ಯಾವ ಕಾರಣಕ್ಕೆ ಇಂಡಿಗೋ ಸಂಸ್ಥೆಗೆ ಸೇರಿದ ಈ ವಿಮಾನಗಳು ಪರಸ್ಪರ ಇಷ್ಟು ಹತ್ತಿರಕ್ಕೆ ಬಂದಿದ್ದವೆಂಬುದು ತನಿಖೆಯ ನಂತರ ತಿಳಿದು ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...