alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ.ವಿ. ಸೀರಿಯಲ್ ವೀಕ್ಷಕರಿಗೆ ಆಘಾತಕಾರಿ ಸುದ್ದಿ

ದಾವಣಗೆರೆ: ಟಿ.ವಿ. ಸೀರಿಯಲ್ ವೀಕ್ಷಕರನ್ನು ಬೆಚ್ಚಿ ಬೀಳಿಸುವ ಪ್ರಕರಣವೊಂದು ದಾವಣಗೆರೆ ಜಿಲ್ಲೆ ಹರಿಹರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಧಾರಾವಾಹಿಯಲ್ಲಿನ ದೃಶ್ಯವನ್ನು ಅನುಕರಿಸಿ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾಳೆ. ಹರಿಹರದ ಆಶ್ರಯ ಬಡಾವಣೆ ನಿವಾಸಿಗಳಾದ ಮಂಜುನಾಥ್ ಮತ್ತು ಚೈತ್ರಾ ದಂಪತಿಯ ಪುತ್ರಿಯಾಗಿರುವ ಪ್ರಾರ್ಥನಾ(8) ಮೃತಪಟ್ಟ ಬಾಲಕಿ.

ಪ್ರಾರ್ಥನಾ ಮನೆಯವರೊಂದಿಗೆ ಪ್ರತಿದಿನ ‘ನಂದಿನಿ’ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದಳು. ಅದರಲ್ಲಿನ ದೃಶ್ಯವೊಂದರಲ್ಲಿ ನಟಿ ಬೆಂಕಿಯ ನಡುವೆ ಡ್ಯಾನ್ಸ್ ಮಾಡುವುದನ್ನು ನೋಡಿದ್ದ ಪ್ರಾರ್ಥನಾ, ನವೆಂಬರ್ 11 ರಂದು ತಾನೂ ಪೇಪರ್ ಗಳನ್ನು ಹರಿದು ಹಾಕಿ ಬೆಂಕಿ ಹಚ್ಚಿ ಅದರ ಮೇಲೆ ಡ್ಯಾನ್ಸ್ ಮಾಡಿದ್ದಾಳೆ.

ಆದರೆ, ಆಕೆಯ ಬಟ್ಟೆಗೆ ತಗುಲಿದ ಬೆಂಕಿಯಿಂದ ಸುಟ್ಟ ಗಾಯಗಳಾಗಿವೆ. ಆಗ ಆಕೆಯ ಸಹೋದರಿ ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದು, ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 12 ರಂದು ಮೃಪಟ್ಟಿದ್ದಾಳೆ.

ಬಾಲಕಿಯ ಪೋಷಕರು ಹರಿಹರ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಧಾರಾವಾಹಿ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...