alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರೋರಾತ್ರಿ ಮಂಟಪದಿಂದಲೇ ಪರಾರಿಯಾದ ವಧು

ತುಮಕೂರು: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಬಂಧು –ಬಾಂಧವರ ಸಮ್ಮುಖದಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ಆರತಕ್ಷತೆಯಲ್ಲಿ ನಗುನಗುತ್ತಲೇ ಇದ್ದ ವಧು ರಾತ್ರೋರಾತ್ರಿ ಮಂಟಪದಿಂದ ಪರಾರಿಯಾಗಿದ್ದಾಳೆ.

ಬೆಂಗಳೂರು ಕಾಮಾಕ್ಷಿ ಪಾಳ್ಯದ ವಧು ಹಾಗೂ ಯಡೆಯೂರಿನ ಯುವಕನ ಮದುವೆ ಇಂದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಯಡೆಯೂರಿನಲ್ಲಿ ನಿಗದಿಯಾಗಿತ್ತು.

ಬಂಧು, ಬಾಂಧವರೆಲ್ಲಾ ಮದುವೆಗೆ ಬಂದಿದ್ದರು. ನಿನ್ನೆ ಸಂಜೆ ಮದುವೆಯ ಕಾರ್ಯಗಳಲ್ಲಿ ಉತ್ಸಾಹದಿಂದಲೇ ಭಾಗಿಯಾಗಿದ್ದ ವಧು ರಾತ್ರಿ ಪರಾರಿಯಾಗಿದ್ದಾಳೆ.

ಆಕೆಯ ಕುಟುಂಬದವರು, ಕೆಲವು ಸಂಬಂಧಿಕರು ಕೂಡ ಮಂಟಪದಿಂದ ಪರಾರಿಯಾಗಿದ್ದಾರೆ. ಇದರಿಂದ ಯುವಕನ ಕುಟುಂಬದವರು ಕಂಗಾಲಾಗಿ ಮದುವೆ ಕಾರ್ಯ ನಿಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...