alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಮೈದನ ಪತ್ನಿಯೊಂದಿಗೆ ಪರಾರಿಯಾದ ಭಾವ

ತುಮಕೂರು: ಬಾಮೈದನ ಪತ್ನಿಯೊಂದಿಗೆ ಭಾವ ಪರಾರಿಯಾದ ವಿಲಕ್ಷಣ ಪ್ರಸಂಗ ಕೊರಟಗೆರೆ ತಾಲ್ಲೂಕಿನ ಜಂಪೇನಹಳ್ಳಿಯಲ್ಲಿ ನಡೆದಿದೆ.

ಪರಾರಿಯಾಗಿರುವ ಪತ್ನಿಯನ್ನು ಹುಡುಕಿಕೊಡುವಂತೆ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದು, ಆಕೆ ವಾಪಸ್ ಬಂದು ಮಕ್ಕಳನ್ನು ನೋಡಿಕೊಂಡಿರಲಿ ಎಂದು ಹೇಳಿದ್ದಾನೆ.

ಬಳೆ ವ್ಯಾಪಾರಿಯಾಗಿರುವ ವ್ಯಕ್ತಿ ತನ್ನಂತೆಯೇ ವ್ಯಾಪಾರ ಮಾಡಿಕೊಂಡಿದ್ದ ಸ್ನೇಹಿತನಿಗೆ ಸಹೋದರಿಯನ್ನು ಕೊಟ್ಟು ಮದುವೆ ಮಾಡಿದ್ದಾನೆ.

ಎರಡೂ ಮನೆಯವರೂ ಅನ್ಯೋನ್ಯವಾಗಿದ್ದು, ಆಗಾಗ ಬಾಮೈದನ ಮನೆಗೆ ಬಂದು ಹೋಗುತ್ತಿದ್ದ ಸ್ನೇಹಿತ ವ್ಯಕ್ತಿಯ ಪತ್ನಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾನೆ.

ಈ ವಿಚಾರ ಪತಿಗೆ ಗೊತ್ತಾಗಿದ್ದು, ಪತಿ ಹಾಗೂ ಮಕ್ಕಳನ್ನು ಬಿಟ್ಟು ಮಹಿಳೆ ಪರಾರಿಯಾಗಿದ್ದಾಳೆ. ಪತ್ನಿಯನ್ನೇ ಕರೆದೊಯ್ದಿರುವ ಸಹೋದರಿಯ ಪತಿಯ ವಿರುದ್ಧ ಆಕ್ರೋಶಗೊಂಡಿರುವ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾನೆ. ಆತನ ತಂಗಿಯೂ ಗಂಡನಿಗಾಗಿ ಹುಡುಕಾಟ ನಡೆಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...