alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಕಚೇರಿಯಲ್ಲೇ ಪ್ರಚಾರ ನಡೆಸಿದ ನೌಕರನಿಗೆ ಥಳಿತ

ತುಮಕೂರು: ಸರ್ಕಾರಿ ಕಚೇರಿಯಲ್ಲೇ ಸರ್ಕಾರಿ ನೌಕರನೊಬ್ಬ ಜೆ.ಡಿ.ಎಸ್. ಪರವಾಗಿ ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿ ಥಳಿಸಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆಯ ಸರ್ಕಾರಿ ಕಚೇರಿಯಲ್ಲಿ ಜೆ.ಡಿ.ಎಸ್. ಪರ ಪ್ರಚಾರ ನಡೆಸಿದ ನೌಕರ ಹಣ ಹಂಚಿಕೆ ಮಾಡಿದ್ದಾರೆ. ಅಂದ ಹಾಗೇ 10 ದಿನಗಳಿಂದ ಅನಾರೋಗ್ಯದ ನೆಪವೊಡ್ಡಿ ರಜೆ ಹಾಕಿದ್ದ ಸಣ್ಣ ನೀರಾವರಿ ಇಲಾಖೆಯ ಈ ನೌಕರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಪ್ರಚಾರ ನಡೆಸುವಾಗಲೇ ಸಿಕ್ಕಿಬಿದ್ದಿದ್ದಾನೆ.

ಕಾಂಗ್ರೆಸ್ ಅಭ್ಯರ್ಥಿ ಪರಮೇಶ್ವರ್ ವಿರುದ್ಧ ಪ್ರಚಾರ ನಡೆಸಿದ ನೌಕರನಿಗೆ ಕಾಂಗ್ರೆಸ್ ಕಾರ್ಯಕರ್ತರು ಥಳಿಸಿದ್ದಾರೆ. ನೌಕರನ ಬಳಿ ಜೆ.ಡಿ.ಎಸ್. ಪಕ್ಷದ ಕರಪತ್ರಗಳು ಹಾಗೂ ಹಣ ಕಂಡು ಬಂದಿದ್ದು, ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಕೊರಟಗೆರೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...