alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸದಲ್ಲಿ ಶಿಕ್ಷಕರು ಮಾಡಿದ್ದಾರೆ ಇಂತಹ ಕೆಲಸ

ತುಮಕೂರು: ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಶಿಕ್ಷಕರು, ಮಕ್ಕಳಿಗೆ ಮದ್ಯ ಕುಡಿಸಿದ ಆರೋಪ ಕೇಳಿ ಬಂದಿದೆ. ಕೊರಟಗೆರೆ ತಾಲ್ಲೂಕು ಬೊಮ್ಮಲದೇವಿಪುರದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಹಾಸನ ಜಿಲ್ಲೆ ಬೇಲೂರಿಗೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಶಿಕ್ಷಕರು ಮದ್ಯ ಸೇವಿಸಿದ್ದಾರೆ. ಪ್ರವಾಸದ ಸ್ಥಳದಲ್ಲಿ ಮಕ್ಕಳನ್ನು ಡ್ಯಾನ್ಸ್ ಮಾಡಲು ಹೇಳಿದ್ದಾರೆ. ಡ್ಯಾನ್ಸ್ ಮಾಡಿದ್ದ ಮಕ್ಕಳು ಸುಸ್ತಾಗಿದ್ದರಿಂದ ನೀರಿನ ಬಾಟಲಿಯಲ್ಲಿ ಮದ್ಯ ಕುಡಿಸಿದ್ದಾರೆ ಎನ್ನಲಾಗಿದೆ.

ಇದರಿಂದಾಗಿ 20 ಕ್ಕೂ ಅಧಿಕ ಮಕ್ಕಳಿಗೆ ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ. ಶನಿವಾರ ರಾತ್ರಿ ಪ್ರವಾಸದಿಂದ ಹಿಂದಿರುಗಿದ ಮಕ್ಕಳು ಭಾನುವಾರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಮಕ್ಕಳಿಂದ ಈ ವಿಷಯ ತಿಳಿದ ಗ್ರಾಮಸ್ಥರು ಶಾಲೆಗೆ ತೆರಳಿ ಶಿಕ್ಷಕರಿಗೆ ಛೀಮಾರಿ ಹಾಕಿದ್ದಾರೆ.

ಆದರೆ, ಈ ಆರೋಪವನ್ನು ಶಿಕ್ಷಕರು ಅಲ್ಲಗಳೆದಿದ್ದಾರೆ. ಆರೋಪ ಮಾಡಿದವರೇ ಈ ಕುರಿತು ತಿಳಿಸಲಿ. ಮಕ್ಕಳಿಗೆ ಮದ್ಯ ಕುಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...