alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದವರಿಗೆ ಗ್ರಾಮಸ್ಥರಿಂದ ಗೂಸಾ

ತುಮಕೂರು: ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೆ. ರಾಮಪುರ ಗ್ರಾಮಸ್ಥರು, ರಾಷ್ಟ್ರಪಕ್ಷಿ ನವಿಲುಗಳನ್ನು ಬೇಟೆಯಾಡಿದ ಇಬ್ಬರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಂಧ್ರಪ್ರದೇಶದ ಕಂಬದೂರು ಗ್ರಾಮದ ಆರೋಪಿಗಳು ಹನುಮನ ಬೆಟ್ಟದಲ್ಲಿ ನವಿಲುಗಳನ್ನು ಬೇಟಿಯಾಡಿ ಚೀಲಗಳಲ್ಲಿ ತುಂಬಿಕೊಂಡು ಹೋಗುವಾಗ ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದಾರೆ.

ನವಿಲು ಸಂರಕ್ಷಣಾ ಪ್ರದೇಶ ಹನುಮನ ಬೆಟ್ಟದಲ್ಲಿ ನಿರಂತರವಾಗಿ ನವಿಲುಗಳು ಕಾಣೆಯಾಗಿರುವುದನ್ನು ಗಮನಿಸಿದ್ದ ಸಾರ್ವಜನಿಕರು ನಿಗಾ ವಹಿಸಿದ್ದಾರೆ.

ಆಂಧ್ರದಿಂದ ಆಗಮಿಸಿ ನವಿಲುಗಳನ್ನು ಕೊಂದು ಸಾಗಿಸುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಇಬ್ಬರನ್ನೂ ಹಿಡಿದು ಥಳಿಸಿ ವೈ.ಎನ್. ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...