alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯತಮನೊಂದಿಗೆ ಪರಾರಿಯಾದ ವಧು

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಯಡೆಯೂರಿನಲ್ಲಿ ವಧು ಪರಾರಿಯಾಗಿದ್ದರಿಂದ ನಡೆಯಬೇಕಿದ್ದ ಮದುವೆಯನ್ನು ನಿಲ್ಲಿಸಲಾಗಿದೆ.

ವಧು ಈ ಮೊದಲೇ ಟಿ.ಟಿ. ಚಾಲಕನನ್ನು ಪ್ರೀತಿಸಿದ್ದು, ಆತನೊಂದಿಗೇ ಪರಾರಿಯಾಗಿದ್ದಾಳೆ. ಮತ್ತೊಂದು ವಿಶೇಷವೆಂದರೆ, ಆಕೆಯ ಪ್ರಿಯತಮನೇ ಮದುವೆಗೆ ವಧು ಮನೆಯವರನ್ನು ಕರೆದುಕೊಂಡು ಬಂದಿದ್ದಾನೆ.

ಬೆಂಗಳೂರು ಕಾಮಾಕ್ಷಿ ಪಾಳ್ಯದ ಯುವತಿಯ ಮದುವೆ ಯಡೆಯೂರಿನ ಆಟೋ ಚಾಲಕನೊಂದಿಗೆ ಇಂದು ನಡೆಯಬೇಕಿತ್ತು. ನಿನ್ನೆ ಆರತಕ್ಷತೆ ಕಾರ್ಯಕ್ರಮದಲ್ಲಿ ಖುಷಿಯಿಂದಲೇ ಪಾಲ್ಗೊಂಡಿದ್ದ ವಧು ರಾತ್ರಿ ಪ್ರಿಯತಮನೊಂದಿಗೆ ಹೋಗಿದ್ದಾಳೆ.

ಆಕೆ ಈ ಹಿಂದೆಯೂ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದ ಸಂದರ್ಭದಲ್ಲಿ ಪ್ರಿಯಕರನೊಂದಿಗೆ ಹೋಗಿದ್ದು, ಆಕೆಯ ಪೋಷಕರು ಕರೆತಂದು ಯಡೆಯೂರಿನ ಯುವಕನೊಂದಿಗೆ ಮದುವೆ ನಿಗದಿ ಮಾಡಿದ್ದಾರೆ.

ವಧು ರಾತ್ರಿ ಪ್ರಿಯಕರನೊಂದಿಗೆ ಹೋಗಿದ್ದರಿಂದ ಕಂಗಾಲಾದ ವರನ ಕುಟುಂಬದವರು ಮದುವೆಯನ್ನು ನಿಲ್ಲಿಸಿದ್ದಾರೆ. ನಷ್ಟವನ್ನು ತುಂಬಿಕೊಡುವಂತೆ ಹುಡುಗಿ ಮನೆಯವರ ಮುಂದೆ ಪಟ್ಟು ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...