alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ್ರೂ ನೆಮ್ಮದಿ ಇಲ್ಲವಾಗಿದೆ ಈ ಯುವ ಪ್ರೇಮಿಗಳಿಗೆ

ತುಮಕೂರು: ಪ್ರೀತಿಸಿದ ಮದುವೆಯಾದ ಜೋಡಿಯೊಂದು ಜೀವಭಯದಲ್ಲಿದ್ದು, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಯುವಕ ಕೆ.ಎಸ್.ಆರ್.ಟಿ.ಸಿ. ಯಲ್ಲಿ ಮೆಕಾನಿಕ್ ಆಗಿದ್ದು, ಖಾಸಗಿ ಕೆಲಸಕ್ಕೆ ತೆರಳುತ್ತಿದ್ದ ಅನ್ಯಕೋಮಿಗೆ ಸೇರಿದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಬೇರೆ ಧರ್ಮದ ಕಾರಣ ಯುವತಿ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿದೆ. ಯುವಕನ ಮನೆಯವರು ಒಪ್ಪಿಕೊಂಡಿದ್ದರೂ, ಯುವತಿಯ ಸಂಬಂಧಿಕರ ಬೆದರಿಕೆಯಿಂದಾಗಿ ನವಜೋಡಿಗೆ ನೆಮ್ಮದಿ ಇಲ್ಲದಂತಾಗಿದೆ. ಇದರಿಂದ ಕಂಗಾಲಾದ ಇಬ್ಬರೂ ಎಸ್.ಪಿ. ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...