alex Certify
ಕನ್ನಡ ದುನಿಯಾ       Mobile App
       

Kannada Duniya

ಆಪರೇಷನ್ ಸಕ್ಸಸ್, ಕೊನೆಗೂ ಚಿರತೆ ಸೆರೆ

ತುಮಕೂರು: ತುಮಕೂರು ಜಯನಗರದ ರಂಗನಾಥ್ ಅವರ ಮನೆಯಲ್ಲಿ ಅಡಗಿದ್ದ ಚಿರತೆಗೆ, ಅರವಳಿಕೆ ಚುಚ್ಚುಮದ್ದು ನೀಡಿ, ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

6 ಮಂದಿ ಸಿಬ್ಬಂದಿ ಕವೆ ಕೋಲು, ಅರವಳಿಕೆ ಮದ್ದು, ಬಲೆ, ಗನ್ ಸಮೇತ ಹೆಲ್ಮೆಟ್ ಧರಿಸಿ ಮನೆಯೊಳಗೆ ಪ್ರವೇಶಿಸಿದ್ದು, ಅಡುಗೆ ಕೋಣೆಯಲ್ಲಿದ್ದ ಚಿರತೆಗೆ ಅರವಳಿಕೆ ನೀಡಿದ್ದಾರೆ.

ಅದು ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಲೆ ಹಾಕಿ ಅದನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿದೆ. ಸೆರೆ ಹಿಡಿದ ಚಿರತೆಯನ್ನು ಬೋನಿಗೆ ಹಾಕಿ ಸಾಗಿಸಲಾಗುತ್ತದೆ. ಬೆಳಿಗ್ಗೆಯಿಂದಲೂ ಮನೆಯೊಳಗೆ ಸೇರಿಕೊಂಡಿದ್ದ ಚಿರತೆ ಆತಂಕ ಮೂಡಿಸಿದ್ದು, ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...