alex Certify
ಕನ್ನಡ ದುನಿಯಾ       Mobile App
       

Kannada Duniya

ಅಡುಗೆಕೋಣೆಯಲ್ಲಿರುವ ಚಿರತೆ ಸೆರೆಗೆ ಕಾರ್ಯಾಚರಣೆ

ತುಮಕೂರು: ತುಮಕೂರು ಜಯನಗರದ ರಂಗನಾಥ್ ಅವರ ಮನೆಯಲ್ಲಿ ಅಡಗಿರುವ ಚಿರತೆ ಸೆರೆಗೆ ಅಂತಿಮ ಹಂತದ ಕಾರ್ಯಾಚರಣೆ ನಡೆಸಲಾಗಿದೆ.

6 ಮಂದಿ ಸಿಬ್ಬಂದಿ ಕವೆ ಕೋಲು, ಅರವಳಿಕೆ ಮದ್ದು, ಬಲೆ, ಗನ್ ಸಮೇತ ಹೆಲ್ಮೆಟ್ ಧರಿಸಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಬಾತ್ ರೂಂನಲ್ಲಿದ್ದ ಅತ್ತೆ ಮತ್ತು ಸೊಸೆಯನ್ನು ಪಾರು ಮಾಡಿದ್ದ ಕಿಟಕಿಯ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಮನೆಯೊಳಗೆ ಪ್ರವೇಶಿಸಿದ್ದಾರೆ.

ಚಿರತೆ ಅಡುಗೆ ಮನೆಯಲ್ಲಿ ಅವಿತುಕೊಂಡಿದ್ದು, ಗೋಡೆಯನ್ನು ಪರಚುತ್ತಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಮನೆಯ ಬಳಿ ಹೆಚ್ಚಿನ ಯುವಕರು ಸೇರಿದ್ದು, ಸ್ಥಳದಿಂದ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಹೊರಗೆ ಬಲೆ, ಬೋನು ಇಡಲಾಗಿದ್ದು, ಚಿರತೆ ತಪ್ಪಿಸಿಕೊಳ್ಳದಂತೆ ಮನೆಯ ಸುತ್ತಲೂ ನಿಗಾ ವಹಿಸಲಾಗಿದೆ. ಜಯನಗರದ ಮನೆಯೊಳಗೆ ಸೇರಿಕೊಂಡಿರುವ ಚಿರತೆ ಸುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...