alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಸೆ ಸ್ನಾನ ಕದ್ದು ನೋಡಿ ಸೆಕ್ಸ್ ಗೆ ಕರೆದ

tumk-mavas

ತುಮಕೂರು: ಆಘಾತಕಾರಿ ಘಟನೆಯೊಂದರಲ್ಲಿ ಮಾವನೇ ಸೊಸೆ ಸ್ನಾನ ಮಾಡುವುದನ್ನು ಕದ್ದು ನೋಡಿ ಸೆಕ್ಸ್ ಗೆ ಕರೆದಿದ್ದಾನೆ.

ಇದನ್ನು ಗಂಡನ ಬಳಿ ಹೇಳಿದರೆ, ಆತನೂ ಅಪ್ಪನಿಗೆ ಸಹಕರಿಸು ಎಂದು ಹೇಳಿದ್ದಾನೆ. ಅತ್ತೆಯೂ ಕುಮ್ಮಕ್ಕು ನೀಡಿದ್ದಾಳೆ ಎನ್ನಲಾಗಿದೆ.

ಅಂದ ಹಾಗೇ ಘಟನೆ ನಡೆದಿರುವುದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದಲ್ಲಿ. 3 ತಿಂಗಳ ಹಿಂದಷ್ಟೇ ಮೈಸೂರಿನ ಯುವತಿಯ ಮದುವೆ ಇಪ್ಪಾಡಿ ಗ್ರಾಮದ ಯುವಕನೊಂದಿಗೆ ನೆರವೇರಿದ್ದು, ಮದುವೆಯ ಸಂದರ್ಭದಲ್ಲಿ ವರದಕ್ಷಿಣೆ, ವರೋಪಚಾರ ನೀಡಲಾಗಿತ್ತು.

ಆದಾದ ಕೆಲ ದಿನಗಳ ಬಳಿಕ ಮತ್ತೆ ವರದಕ್ಷಿಣೆಗಾಗಿ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗಿದೆ. ಇಷ್ಟು ಮಾತ್ರವಲ್ಲ, ಮಾವ ಆಗಾಗ ಸೊಸೆಯ ಮೈ ಕೈ ಮುಟ್ಟುವ ಜೊತೆಗೆ ಸೆಕ್ಸ್ ಗೆ ಕರೆಯುತ್ತಿದ್ದ. ಅಲ್ಲದೇ ಸ್ನಾನ ಮಾಡುವಾಗ ಒಳ ನುಗ್ಗಿ ಮೈ ಮುಟ್ಟುತ್ತಿದ್ದ ಎನ್ನಲಾಗಿದೆ.

ಇದೆಲ್ಲ ವಿಚಾರವನ್ನು ಗಂಡ, ಅತ್ತೆಯ ಬಳಿ ಹೇಳಿದರೂ ಸ್ಪಂದಿಸಿಲ್ಲ. ಆಗಾಗ ಸರಸಕ್ಕೆ ಆಹ್ವಾನಿಸುತ್ತಿದ್ದ ಮಾವನ ಮಾತುಗಳನ್ನು ಯುವತಿ ರೆಕಾರ್ಡ್ ಮಾಡಿಕೊಂಡು ಕುಣಿಗಲ್ ಠಾಣೆಗೆ ದೂರು ನೀಡಿದ್ದಾಳೆ. ದೂರು ದಾಖಲಾದ ಕೂಡಲೇ ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...